ಗಾಂಜಾ ವಶ: ಮೂವರ ಬಂಧನ

7

ಗಾಂಜಾ ವಶ: ಮೂವರ ಬಂಧನ

Published:
Updated:
Deccan Herald

ಜನವಾಡ: ಬೀದರ್‌ ತಾಲ್ಲೂಕಿನ ಬಗದಲ್‌ ಠಾಣೆಯ ಪೊಲೀಸರು ಬಗದಲ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಶನಿವಾರ ಬುಲೆರೊ ತಡೆದು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹ 21 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡು, ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತೆಲಂಗಾಣದ ಗಡಿಯಿಂದ ಬೀದರ್‌ಗೆ ಗಾಂಜಾ ಪಾಕೆಟ್‌ಗಳನ್ನು ತರುತ್ತಿರುವ ಖಚಿತ ಮಾಹಿತಿ ಮೇರೆಗೆ ಶಾಲೆಯ ಬಳಿ ವಾಹನ ತಡೆದು ಉಸ್ಮಾನಾಬಾದ್‌ನ ಶಿವದಾಸ್, ರಾಮದಾಸ್ ಹಾಗೂ ಬನ್ಸಿ ಎನ್ನುವವರನ್ನು ಬಂಧಿಸಿ 5.30 ಕೆಜಿ ಗಾಂಜಾ, ₹ 50 ಸಾವಿರ ನಗದು, ಮೂರು ಮೊಬೈಲ್‌ ಹಾಗೂ ಬುಲೆರೊ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಿಎಸ್‌ಐ ಮಂಜುನಾಥ ಬಾರ್ಕಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕಾನ್‌ಸ್ಟೆಬಲ್‌ ಪಿ.ರಾಜು, ಪರಶುರಾಮ ರೆಡ್ಡಿ ಹಾಗೂ ಸಂಜು ರೆಡ್ಡಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !