ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯಾನಗಳ ಅಭಿವೃದ್ಧಿಗೆ ಬಿಡಿಎ ಅನುದಾನ’

ನಿವೇಶನ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ವಾಲಿ
Last Updated 21 ಮಾರ್ಚ್ 2023, 5:03 IST
ಅಕ್ಷರ ಗಾತ್ರ

ಬೀದರ್‌: ‘ನಗರದ 20 ಸಾರ್ವಜನಿಕ ಉದ್ಯಾನಗಳ ಅಭಿವೃದ್ಧಿಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಲಾ ₹ 10 ಲಕ್ಷ ಅನುದಾನ ನೀಡಲು ನಿರ್ಣಯಿಸಲಾಗಿದೆ’ ಎಂದು ಬುಡಾ ಅಧ್ಯಕ್ಷ ಬಾಬು ವಾಲಿ ತಿಳಿಸಿದರು.

ಉದ್ಯಾನಗಳ ಸುತ್ತುಗೋಡೆ, ಓಪನ್ ಜಿಮ್ ನಿರ್ಮಿಸಲಾಗುವುದು. ಅಭಿವೃದ್ಧಿಪಡಿಸಿದ ಉದ್ಯಾನಗಳ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಬಡಾವಣೆಗಳ ಸ್ಥಾನಿಕ ಸಂಸ್ಥೆಗಳಿಗೆ ವಹಿಸಲಾಗುವುದು. ಜಿಲ್ಲಾ ಪೊಲೀಸರಿಗೆ ಟೂಲ್ ವಾಹನ ಖರೀದಿಸಲು ಪ್ರಾಧಿಕಾರದಿಂದ ₹ 25 ಲಕ್ಷ ನೀಡಲಾಗುವುದು ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಾಧಿಕಾರದ ಒಟ್ಟು 275 ನಿವೇಶನಗಳ ಪೈಕಿ ಈವರೆಗೆ 188 ನಿವೇಶ ಹಂಚಿಕೆಯಾಗಿವೆ. ಯುಗಾದಿ ದಿನ ನಿವೇಶನದಾರರಿಗೆ ನಿವೇಶನ ಪ್ರಮಾಣಪತ್ರ ಕೊಡಲಾಗುವುದು ಎಂದು ತಿಳಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ 75 ಉದ್ಯಾನಗಳಿಗೆ ಮಹಾತ್ಮರು ಮತ್ತು ಸಾಧಕರ ಹೆಸರುಗಳನ್ನು ನಾಮಕಾರಣ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಬೀದರ್ ಜಿಲ್ಲೆಯು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ಗೆ ಬಳವಳಿಯಾಗಿ ನೀಡಿದೆ. ಆದರೆ ಅವರು ಅರಳಿಯವರನ್ನು ಶನಿಯಾಗಿ ಕೊಟ್ಟಿದ್ದಾರೆ. ಬಿಡಿಎದಿಂದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಂತ್ರಿಕ ದೋಷದಿಂದ ಕೋರ್ಟ್ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗುವುದು. ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಯಾವುದೇ ಬೆದರಿಕೆಗೆ ಹೆದರುವುದಿಲ್ಲ. ಲೋಕಾಯುಕ್ತ, ಸಿಐಡಿ ಯಾವುದೇ ತನಿಖೆಗೂ ಸಿದ್ಧ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT