ಬುಧವಾರ, ಜನವರಿ 22, 2020
18 °C

ಪರರನ್ನು ಕ್ಷಮಿಸಿ, ಪ್ರೀತಿಸಿದರೆ ದೇವರನ್ನು ಪೂಜಿಸಿದಂತೆ: ಫಾದರ್ ಸಂತೋಷ ಬಾಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಬಡ, ನಿರ್ಗತಿಕ, ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಅವರಲ್ಲಿಯೇ ದೇವರನ್ನು ಕಾಣುವುದು ನಿಜವಾದ ಕ್ರಿಸ್‍ಮಸ್ ಆಚರಣೆ ಆಗಿದೆ. ಪರರನ್ನು ಕ್ಷಮಿಸಿ, ಪ್ರೀತಿಸಿದರೆ ದೇವರನ್ನು ಪೂಜಿಸಿದಂತೆ ಎಂದು ಫಾದರ್ ಸಂತೋಷ ಬಾಪು ಹೇಳಿದರು. ಪಟ್ಟಣದಲ್ಲಿ ಕ್ರಿಸ್‍ಮಸ್ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯತ್ವದಿಂದ ದೈವತ್ವದ ಕಡೆಗೆ ಸಾಗಬೇಕು. ಹಗೆತನ ಬಿಟ್ಟು ಪ್ರೀತಿಯನ್ನು ಬೆಳೆಸಿಕೊಂಡಾಗ ಯೇಸು ನಮ್ಮ ಆತ್ಮದಲ್ಲಿ ಜನಿಸುತ್ತಾರೆ ಎಂದರು.

ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಜಮಾತೆ ಇಸ್ಲಾಮ್ ತಾಲ್ಲೂಕು ಅಧ್ಯಕ್ಷ ರಫಿಕ್, ಸೊಮನಾಥಪ್ಪ ಅಸ್ಟೂರೆ, ಸಂತೋಷ ಬಿ.ಜಿ ಪಾಟೀಲ, ಅಶೋಕ ಮೈನಾಳೆ, ರೈತ ಮುಖಂಡರಾದ ನಾಗಶೆಟ್ಟೆಪ್ಪಾ ಲಂಜವಾಡೆ, ಸಿಸ್ಟರ್ ಶಾಂತಿ, ತಾನಾಜಿ, ಸುಕೀರ್ತ ರಾಜಶೇಖರ ರೇಷ್ಮೆ ಹಾಗೂ ಫಾದರ್ ಕ್ಲೇರಿ ಡಿಸೊಜಾ ಇದ್ದರು. ಫಾದರ್ ಜೊಸೆಫ್ ಪ್ರವೀಣ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು