ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ

ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜು
Last Updated 8 ಆಗಸ್ಟ್ 2022, 13:22 IST
ಅಕ್ಷರ ಗಾತ್ರ

ಬೀದರ್‌: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಇಲ್ಲಿಯ ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಸತ್ಕರಿಸಲಾಯಿತು.

ಕಾಲೇಜು ಟಾಪರ್ ರಾಜೇಶ್ವರಿ ಸಂಜುಕುಮಾರ (ಶೇ 96.16), ಆದಿತ್ಯ ಸಂತೋಷ ಶೆಟಕಾರ್ (ಶೇ 94.33), ಮಹೇಶ ಶ್ರೀನಿವಾಸ (ಶೇ 92.66), ಆಶಾ ದಶರಥ (ಶೇ 90.5), ಪವನ್ ಹಣಮಂತ (ಶೇ 89.66) ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಲಾಯಿತು.

ಬಿ.ಕೆ.ಐ.ಟಿ. ಪ್ರಾಚಾರ್ಯ ಎನ್.ಎಂ. ಬಿರಾದಾರ ಮಾತನಾಡಿ, ದ್ವಿತೀಯ ಪಿಯುಸಿ ನಂತರ ಹಲವು ಕೋರ್ಸ್‍ಗಳು ಇವೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಸಾಯಿ ಸ್ಫೂರ್ತಿ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಬಿರಾದಾರ ಮಾತನಾಡಿ, ನುರಿತ, ಅನುಭವಿ ಉಪನ್ಯಾಸಕರು, ಗುಣಮಟ್ಟದ ಶಿಕ್ಷಣದಿಂದಾಗಿ ಕಾಲೇಜು ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದೆ ಎಂದು ತಿಳಿಸಿದರು.

ಚಿಟಗುಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಭೌತವಿಜ್ಞಾನ ಉಪನ್ಯಾಸಕ ಶಿವಕುಮಾರ ಮಚಕೂರೆ ಮಾತನಾಡಿದರು.
ಬಿ.ಕೆ.ಐ.ಟಿ.ಯ ಪ್ರೊ. ಉಮಾಕಾಂತ ಮಠಪತಿ, ಪ್ರೊ. ಖಾಜಾ ಎಂ., ಪ್ರೊ. ವಿಜಯ ಕೆ., ಡಾ. ಪ್ರಶಾಂತ ಸಂಗೋಳಗಿ, ಪ್ರೊ. ಗುಂಡಪ್ಪ, ಅಂಬಿಕಾ ಎಂ ಇದ್ದರು. ಉಪನ್ಯಾಸಕ ಲಕ್ಷ್ಮಿಕಾಂತ ಸೂರೆ ಸ್ವಾಗತಿಸಿದರು. ದಿವ್ಯಾ ಮಠದ ನಿರೂಪಿಸಿದರು. ಸಂಜೀವಕುಮಾರ ಬಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT