ಶುಕ್ರವಾರ, ನವೆಂಬರ್ 22, 2019
22 °C

ಸಸಿ ನೆಟ್ಟು ಪರಿಸರ ಸಂರಕ್ಷಿಸಿ: ವಾಹನ ನಿರೀಕ್ಷಕ ಮಹ್ಮದ ಜಾಫರ

Published:
Updated:
Prajavani

ಹುಮನಾಬಾದ್: ವಾಯು ಮಾಲಿನ್ಯ ತಡೆ ಮತ್ತು ಪರಿಸರ ಸಂರಕ್ಷಣೆಗಾಗಿ ಪ್ರತಿಯೂಬ್ಬರೂ ಶ್ರಮಿಸಬೇಕು ಎಂದು ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ವಾಹನ ನಿರೀಕ್ಷಕ ಮಹ್ಮದ ಜಾಫರ ಸಾಧಿಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ವಾಹನ ಚಾಲಕರಿಗೆ ಸಸಿ ವಿತರಿಸಿ ಅವರು ಮಾತನಾಡಿದರು.

ವಾಯು ಮಾಲಿನ್ಯ ತಡೆಗಟ್ಟಬೇಕಾದರೆ ವಾಹನ ಚಾಲಕರು ಮುಂಜಾಗ್ರತೆ ವಹಿಸಬೇಕು. ರೈಲ್ವೆ ಕ್ರಾಸಿಂಗ್, ಟ್ರಾಫಿಕ ಸಿಗ್ನಲ್ ಹತ್ತಿರ ಮತ್ತು ಮೊಬೈಲ್‌ನಲ್ಲಿ ಮಾತನಾಡುವಾಗ ವಾಹನವನ್ನು ಬಂದ್ ಮಾಡಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರು ವಾಯು ಮಾಲಿನ್ಯ ತಡೆಯಬಹುದು ಎಂದರು.

ವಾಹನಗಳಿಂದ ಬರುವ ಹೊಗೆ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರ ಸಂರಕ್ಷಣೆಗಾಗಿ ಸಸಿ ನೆಟ್ಟು ಪೋಷಿಸಬೇಕು ಎಂದು
ಹೇಳಿದರು.

ದೇಶದಲ್ಲಿ ಸುಮಾರು 130 ಕೋಟಿ ಜನಸಂಖ್ಯೆ ಇದೆ. ಒಬ್ಬರು ಒಂದು ಗಿಡ ನೆಟ್ಟರೂ 130 ಕೋಟಿ ಗಿಡಗಳು ಬೆಳೆಯುತ್ತವೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಜತೆಗೆ ವಾಯು ಮಾಲಿನ್ಯ ಕೂಡ ತಡೆಗಟ್ಟಬಹುದು ಎಂದು ಹೇಳಿದರು.

ಶಿವರಾಜ ಜಮಾದಾರ, ಸುರೇಶ ಜೋಕಾಲೆ, ಅಬ್ದುಲ್ ರಶೀದ, ಜಾಲೇಂದ್ರ, ರಾಜು ನಿರ್ಣಾ, ವಿಜಯಕುಮಾರ ದುಬಲಗುಂಡಿ, , ಪ್ರದೀಪ ಹಳ್ಳಿಖೇಡ, ಜ್ಞಾನೇಶ್ವರ ಇದ್ದರು.

ಪ್ರತಿಕ್ರಿಯಿಸಿ (+)