ಮಂಗಳವಾರ, ಸೆಪ್ಟೆಂಬರ್ 17, 2019
21 °C

ನಾಳೆ ಬೀದರ್‌ಗೆ ಗುರುನಾನಕ ಪ್ರಕಾಶ ಯಾತ್ರೆ

Published:
Updated:
Prajavani

ಬೀದರ್: ದೇಶದ 20 ರಾಜ್ಯಗಳಲ್ಲಿ ಮಾನವೀಯ ಮೌಲ್ಯಗಳ ಪ್ರಚಾರ ನಡೆಸಿರುವ ಗುರುನಾನಕ ಪ್ರಕಾಶ ಪುರಬ್ ಯಾತ್ರೆ ಸೆ.7 ರಂದು ನಗರಕ್ಕೆ ಮರಳಲಿದ್ದು, ಗುರುನಾನಕ ಝೀರಾ ಫೌಂಡೇಶನ್ ಸ್ವಾಗತ ಸಮಾರಂಭ ಹಮ್ಮಿಕೊಂಡಿದೆ.

ಗುರುನಾನಕರ 550ನೇ ಜಯಂತಿ ಅಂಗವಾಗಿ ಜೂನ್ 2ರಂದು ಇಲ್ಲಿಯ ಗುರುದ್ವಾರದಿಂದ ಆರಂಭವಾದ ಯಾತ್ರೆಯು ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ,  ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ, ರಾಜಸ್ತಾನ, ಗುಜರಾತ್, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಮೂಲಕ ಹಾಯ್ದು ತೆಲಂಗಾಣದ ಹೈದರಾಬಾದ್‌ ನಗರವನ್ನು ತಲುಪಿದೆ.

ಹೈದರಾಬಾದ್‌ನ ಅಮಿರಪೇಟ್‌ನಲ್ಲಿ ಗುರುವಾರ ಯಾತ್ರೆಗೆ ಭಕ್ತರು ಸ್ವಾಗತ ನೀಡಿದ್ದು, ಅಲ್ಲಿಂದ ಯಾತ್ರೆ ಬೀದರ್‌ನತ್ತ ಹೊರಟಿದೆ.

ಯಾತ್ರೆಯು ಶನಿವಾರ ಮಧ್ಯಾಹ್ನ 2.30ಕ್ಕೆ ನಗರಕ್ಕೆ ಬರಲಿದೆ. ಕರ್ನಾಟಕ-ತೆಲಂಗಾಣ ಗಡಿಯಲ್ಲಿ ಬೀದರ್-ಹೈದರಾಬಾದ್ ರಸ್ತೆಯಲ್ಲಿ ಯಾತ್ರೆಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುವುದು. ಅಲ್ಲಿಂದ ಯಾತ್ರೆಯ ನಗರ ಕೀರ್ತನೆ ನಡೆಯಲಿದೆ. ಭಜನೆ, ಪಲ್ಲಕ್ಕಿ ಕಾರ್ಯಕ್ರಮಗಳು ಆಕರ್ಷಣೆಯಾಗಿರಲಿವೆ ಎಂದು ಗುರುದ್ವಾರ ನಾನಕ ಝೀರಾ ಸಾಹೇಬ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)