ಬುಧವಾರ, ಸೆಪ್ಟೆಂಬರ್ 18, 2019
25 °C

ಜ್ಞಾನಸುಧಾ ವಿದ್ಯಾಲಯಕ್ಕೆ ರಾಷ್ಟ್ರ ಪ್ರಶಸ್ತಿ

Published:
Updated:
Prajavani

ಬೀದರ್: ಇಲ್ಲಿಯ ಜ್ಞಾನಸುಧಾ ವಿದ್ಯಾಲಯಕ್ಕೆ ಇಂಡಿಯನ್ ಸ್ಕೂಲ್ ಅವಾರ್ಡ್ ವತಿಯಿಂದ ಕೊಡಲಾಗುವ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಡೇ ಬೋರ್ಡರ್ ಶಾಲೆ ಪ್ರಶಸ್ತಿ ದೊರಕಿದೆ.

ಹರಿಯಾಣದ ಗುರಗಾಂವನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ವಿಶೇಷ ಸಲಹೆಗಾರ ಡಾ.ದೀಪಕ ವೋಹ್ರಾ ಅವರು ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷೆ ಡಾ. ಪೂರ್ಣಿಮಾ ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ದೇಶದ ವಿವಿಧೆಡೆಯ 80 ಶಾಲೆಗಳ ಮುಖ್ಯಸ್ಥರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಜ್ಞಾನ ಸುಧಾ ವಿದ್ಯಾಲಯದಲ್ಲಿ ಒದಗಿಸುತ್ತಿರುವ ಗುಣಮಟ್ಟದ ಶಿಕ್ಷಣ, ಊಟ ಹಾಗೂ ಇತರ ಸೌಲಭ್ಯಗಳನ್ನು ಪರಿಗಣಿಸಿ ವಿದ್ಯಾಲಯವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿದ್ಯಾಲಯದಲ್ಲಿ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ, ಸ್ಕೇಟಿಂಗ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್, ಅರ್ಚರಿ ತರಬೇತಿಗಳನ್ನೂ ನೀಡಲಾಗುತ್ತಿದೆ ಎಂದು ಡಾ. ಪೂರ್ಣಿಮಾ ಜಿ. ತಿಳಿಸಿದ್ದಾರೆ.

ವಿದ್ಯಾಲಯ ಈಗಾಗಲೇ ಮುಂಬೈನ ರಾಷ್ಟ್ರೀಯ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ ಹಾಗೂ ಭಾರತದ ಗುಣಮಟ್ಟದ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹೇಳಿದ್ದಾರೆ.

ವಿದ್ಯಾಲಯಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ, ಪ್ರಾಚಾರ್ಯೆ ಸುನೀತಾ ಸ್ವಾಮಿ, ಡೇ ಬೋರ್ಡರ್ ಮೇಲ್ವಿಚಾರಕ ಶಾಂತಕುಮಾರ ಸಂತಸ ವ್ಯಕ್ತಪಡಿಸಿದ್ದಾರೆ.

Post Comments (+)