ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಈರಣ್ಣ ಹಡಪದ

ಹಡಪದ ಸಮಾಜದ ಶಕ್ತಿ ಪ್ರದರ್ಶನ
Last Updated 31 ಮಾರ್ಚ್ 2021, 3:34 IST
ಅಕ್ಷರ ಗಾತ್ರ

ಬಸವಕಲ್ಯಾಣ: ಬಿಜೆಪಿ ಮುಖಂಡರು ಹಾಗೂ ಹಡಪದ ಸಮಾಜ ಸಂಘದ ಕಲಬುರ್ಗಿ ವಿಭಾಗೀಯ ಘಟಕದ ಅಧ್ಯಕ್ಷ ಈರಣ್ಣ ಹಡಪದ ಅವರು ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ಸಮಾಜದ ಬಾಂಧವರೊಂದಿಗೆ ಮಹಾತ್ಮ ಗಾಂಧಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಈರಣ್ಣ ಹಡಪದ ಮಾತನಾಡಿ, ‘ಶರಣ ಹಡಪದ ಅಪ್ಪಣ್ಣನವರು 12 ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿ ಆಗಿದ್ದರು. ಆದರೂ, ಈ ಸಮಾಜದವರು ಎಲ್ಲ ರೀತಿಯಿಂದ ಹಿಂದುಳಿದಿದ್ದಾರೆ. ರಾಜ್ಯದಲ್ಲಿ ಈ ಸಮುದಾಯದ 15 ಲಕ್ಷ ಜನಸಂಖ್ಯೆಯಿದೆ. ಸರ್ಕಾರ ಸಮಾಜಕ್ಕೆ ಸೌಲಭ್ಯ ನೀಡುತ್ತಿಲ್ಲ. ನಿಗಮ, ಮಂಡಳಿಗಳಿಗೆ ನೇಮಿಸುತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುತ್ತಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸಲಾಗುತ್ತಿದೆ’ ಎಂದರು.

ತಂಗಡಗಿ ಅನ್ನದಾನಿ ಅಪ್ಪಣ್ಣ ಭಾರತಿ ಸ್ವಾಮೀಜಿ, ರಾಜಶಿವಯೋಗಿ ಶಹಾಬಾದ್, ಸಿದ್ದು ಮುಂಡಗೋಡ, ಮಲ್ಲಿಕಾರ್ಜುನ ಸುಗೂರ, ನಾಗರಾಜ ಸರ್ಜಾಪುರ, ಭಗವಾನ ವನಖೇಣಗಿ, ಶಿವಪ್ಪ ಖಜೂರಿ, ರಮೇಶ ನಿಲೂರ, ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶಾ ಬಾಂದೇಕರ್, ದತ್ತಾತ್ರಿ ಮೂಲಗೆ, ವೆಂಕಟೇಶ ಬಾಂದೇಕರ್, ಪಾಂಡುರಂಗ ಗದ್ಲೇಗಾಂವ್, ದತ್ತಾತ್ರಿ ಬಾಂದೇಕರ್, ವೆಂಕಟೇಶ ಔರಾದಕರ್, ರಾಮಣ್ಣ ಗದ್ಲೇಗಾಂವ್, ಜಗದೀಶ ನೆಲವಾಡಕರ್, ಶರಣಪ್ಪ ಬಾಲ್ಕುಂದಾ, ಪ್ರದೀಪ ಹಂದ್ರಾಳ, ಶರಣಪ್ಪ ಕೆನಳ್ಳಿ, ಶಂಕರ ಶೆಡೋಳ, ಮಲ್ಲಿಕಾರ್ಜುನ, ರಾಜಕು ಮಾರ,ಸೋಮನಾಥ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT