ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಿ: ಶಾಸಕ ರಾಜಶೇಖರ ಪಾಟೀಲ

ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ಚಾಲನೆ: ಹೇಳಿಕೆ
Last Updated 14 ಆಗಸ್ಟ್ 2022, 3:16 IST
ಅಕ್ಷರ ಗಾತ್ರ

ಕಮಲನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾಂಗ್ರೆಸ್‌ ಹಮ್ಮಿಕೊಂಡಿರುವ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ಸಂಗಮ ಗ್ರಾಮದಲ್ಲಿ ಶಾಸಕ ರಾಜಶೇಖರ ಪಾಟೀಲ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ,‘ಅನೇಕ ಮಹಾತ್ಮರ ತ್ಯಾಗ–ಬಲಿದಾನದಿಂದಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದೇವೆ. ಯುವ ಜನತೆ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಮಾತನಾಡಿದರು. ಪಾದಯಾತ್ರೆಯು ಸಂಗಮದಿಂದ ಸಾವಳಿ, ಹೊಳಸಮುದ್ರ, ಡಿಗ್ಗಿ ಮಾರ್ಗವಾಗಿ ಕಮಲನಗರ ಪಟ್ಟಣ ತಲುಪಿತು. ಡಿಗ್ಗಿ ಗ್ರಾಮದ ಮಡಿವಾಳೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಮಾರೋಪ ಸಮಾರಂಭ:ಪಟ್ಟಣದ ಬ್ರೈಟ್‍ಲ್ಯಾಂಡ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆ ಮತ್ತು ಸಮಾರೋಪ ಸಮಾರಂಭದಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ,‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಪೂರ್ಣಗೊಂಡಿವೆ. ಹಲವರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದರು.ತಾಲ್ಲೂಕು ಪ್ರಭಾರಿ ಶರಣು ಮೋದಿ, ಸಂಯೋಜಕ ಕನಿರಾಮ ರಾಠೋಡ್, ಗೋಪಿಕೃಷ್ಣ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮಾಂತರ ಅಧ್ಯಕ್ಷ ಆನಂದ ಚವಾಣ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಧಾಕರ ಕೊಳ್ಳುರ, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಗಂದಗೆ, ಮುಖಂಡ ಡಾ.ಭೀಮಸೇನ ಸಿಂಧೆ, ವಿಶ್ವನಾಥ ದಿನೆ, ಡಾ.ಲಕ್ಷ್ಮಣರಾವ ಸೋರಳ್ಳಿಕರ್, ಲಕ್ಷ್ಮಣರಾವ ಬುಳ್ಳಾ, ಶಂಕರ ದೊಡ್ಡಿ, ವೆಂಕಟ ಜಾಧವ, ಕೆಪಿಸಿಸಿ ಕಾರ್ಮಿಕ ವಿಭಾಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಭು ಬೆಣ್ಣೆ, ಡಿಗ್ಗಿ ಅಧ್ಯಕ್ಷ ಮಡಿವಾಳಪ್ಪ, ಪ್ರವೀಣ ಕದಂ, ಪ್ರವೀಣ, ಶಾಂತಕುಮಾರ, ಮಹಾದೇವ, ಪಂಡಿತ ಪಾಟೀಲ, ಪ್ರವೀಣ ಪಾಟೀಲ ಪ್ರದೀಪ ಹಾಗೂ ಬಾಲಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT