ಗುರುವಾರ , ನವೆಂಬರ್ 21, 2019
26 °C
24ನೇ ಅಖಂಡ ಹರಿನಾಮ ಸಪ್ತಾಹ ಸಮಾರೋಪ ಸಮಾರಂಭ

‘ಆತ್ಮಶುದ್ಧಿಗೆ ಜ್ಞಾನೇಶ್ವರಿ ಪ್ರವಚನ ಸಹಕಾರಿ’

Published:
Updated:
Prajavani

ಕಮಲನಗರ: ‘ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನೇಶ್ವರಿ ಪಾರಾಯಣ ಪವಿತ್ರ ಗ್ರಂಥ. ಅಖಂಡ ಹರಿನಾಮ ಸಪ್ತಾಹ ದಿನ ವಿಶಿಷ್ಟ ಸ್ಥಾನವಿದೆ. ಈ ದಿನದಲ್ಲಿ ಜ್ಞಾನೇಶ್ವರಿ ಗ್ರಂಥದ ಸಾರ ಮತ್ತು ಪ್ರವಚನ ಆಲಿಸುವುದರಿಂದ ಆತ್ಮಶುದ್ಧಿಯಾಗುತ್ತದೆ’ ಎಂದು ಪಂಡರಪುರದ ಏಕನಾಥ ಮಹಾರಾಜ ಹಂಡೇಕರ ಹೇಳಿದರು.

ತಾಲ್ಲೂಕಿನ ಮುರ್ಗ(ಕೆ) ಗ್ರಾಮದ ಹನುಮಾನ ಮಂದಿರದಲ್ಲಿ 24ನೇ ಅಖಂಡ ಹರಿನಾಮ ಸಪ್ತಾಹ ಮತ್ತು ಶ್ರೀ ಜ್ಞಾನೇಶ್ವರಿ ಪಾರಾಯಣ ಸಮಾರೋಪ ಸಮಾರಂಭದಲ್ಲಿ ಪೂಜ್ಯರು ಮಾತನಾಡಿದರು.

‘ಹರಿನಾಮ ಸಪ್ತಾಹ ಮತ್ತು ಜ್ಞಾನೇಶ್ವರಿ ಪಾರಾಯಣ ಎಂದರೆ ಶ್ರವಣ ಮಾಡುವ ಕಾಲ. ಈ ವಾರದಲ್ಲಿ ಮಹಾರಾಜರು, ಅನುಭಾವಿಗಳು ಹೇಳುವ ಸದ್ವಿಚಾರ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ, ಸುಖ, ನೆಮ್ಮದಿ ಪ್ರಾಪ್ತವಾಗುತ್ತದೆ’ ಎಂದರು.

‘ನಾಡಿಗೆ ದಾರ್ಶನಿಕರ, ಮಹಾಪುರುಷರ, ಸಾಧು-ಸಂತರ ಪರಂಪರೆ ಇದೆ. ಆದರೂ ಜನರು ಪರಕೀಯ ಸಂಸ್ಕೃತಿಯ ಮೋಹಕ್ಕೆ ಒಳಗಾಗಿ ಅವನತಿ ಹೊಂದುತ್ತಿದ್ದಾರೆ. ನಮ್ಮ ಶ್ರೇಷ್ಠ ಸಂಸ್ಕೃತಿ ಪರಂಪರೆಯ ರಕ್ಷಣೆ ಮಾಡುವುದರ ಜೊತೆಗೆ ಅನುಕರಣೆ ಮಾಡಿದರೇ ಮನುಕುಲಕ್ಕೆ ಒಳಿತು ಬಯಸುವ ಕಾಲವೂ ಸಹ ಇದಾಗಿದೆ’ ಎಂದರು.

ಹರಿನಾಮ ಸಪ್ತಾಹದ ನಿಮಿತ್ತ ಗ್ರಾಮದಲ್ಲಿ ಜ್ಞಾನೇಶ್ವರಿ ಭಾವಚಿತ್ರದೊಂದಿಗೆ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು.

ಭಜನಾ ಮಂಡಳಿ ಅಧ್ಯಕ್ಷ ಧೊಂಡಿಬಾ ಪಾಟೀಲ, ಉಪಾಧ್ಯಕ್ಷ ಡಾ.ಮೋಹನರಾವ ಜಾಧವ, ಸದಸ್ಯ ಆನಂದರಾವ ಜಾಧವ, ರಾಹುಲ ಜಾಧವ, ವಿಶಂಬರ ಜಾಧವ, ವಿಲಾಸ ಬಿರಾದಾರ, ರಮಾಕಾಂತ ಜಾಧವ, ಸಚಿನ ಜಾಧವ, ವೆಂಕಟರಾವ ಜಾಧವ, ನೇತಾಜಿ ರಾಜನಾಳೆ, ವಿಶಾಲ ಜಾಧವ, ದಯಾನಂದ ಜಾಧವ, ದಿನೇಶ ಬಿರಾದಾರ, ಸಂತೋಷ ಬಿರಾದಾರ, ಗೋವಿಂದ ಜಾಧವ, ರಾಜಕುಮಾರ ಮೋಘೆ, ಭಾಗವತ ಬಿರಾದಾರ, ಬಾಲಾಜಿ ಬಿರಾದಾರ, ಶಾಮ ಜಾಧವ ಇದ್ದರು.

ಪ್ರತಿಕ್ರಿಯಿಸಿ (+)