ಬೀದರ್: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.

ದಿನವಿಡೀ ಪ್ರಖರವಾದ ಬಿಸಿಲು ಇತ್ತು. ಸಂಜೆ ದಟ್ಟ ಕಾರ್ಮೋಡ ಕವಿದು, ಬಿರುಗಾಳಿಯೊಂದಿಗೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಬಿರುಗಾಳಿ ಮಳೆಗೆ ನಗರದ ಹಳ್ಳದಕೇರಿ ಸಮೀಪ ರಿಂಗ್ರೋಡ್ನಲ್ಲಿ ಬುಡಸಮೇತ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸಂಚಾರಕ್ಕೆ ತೊಡಕಾಯಿತು. ಬಿದಿರಿನ ಹೋಟೆಲ್ವೊಂದು ಸಂಪೂರ್ಣ ನೆಲಕಚ್ಚಿದೆ.

ಅರ್ಧಗಂಟೆಗೂ ಹೆಚ್ಚು ಸಮಯ ಸುರಿದ ಜೋರು ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಬೀದರ್ ತಾಲ್ಲೂಕಿನ ಅಮಲಾಪೂರ, ಚಿಟ್ಟಾ, ಘೋಡಂಪಳ್ಳಿ, ಯದಲಾಪೂರ, ಯಾಕತಪೂರ, ಕಮಠಾಣ ಹಾಗೂ ಔರಾದ್ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿಯೂ ಬಿರುಸಿನ ಮಳೆ ಸುರಿದಿದೆ.

ಸಿಡಿಲಿಗೆ ಇಬ್ಬರು ಮಹಿಳೆಯರ ಸಾವು

ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲಿನ ಅಬ್ಬರಕ್ಕೆ ಗಂಗವ್ವ ಶೇಖಪ್ಪ ಜಿರಗವಾಡ (55) ಹಾಗೂ ಕಲಾವತಿ ವಿರೂಪಾಕ್ಷಿ ಜಿರಗವಾಡ (42) ಮೃತಪಟ್ಟಿದ್ದಾರೆ. ‘ಇವರಿಬ್ಬರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಕೃಷಿ ಚಟುವಟಿಕೆಗಾಗಿ ತಮ್ಮ ಜಮೀನಿಗೆ ತೆರಳಿದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಘಟನಾ ಸ್ಥಳ ಪರಿಶೀಲಿಸಿ ಪರಿಹಾರ ನೀಡಲಾಗುವುದು’ ಎಂದು ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.