ನೆರೆ ಸಂತ್ರಸ್ತರಿಗೆ ನೆರವು

7

ನೆರೆ ಸಂತ್ರಸ್ತರಿಗೆ ನೆರವು

Published:
Updated:
Deccan Herald

ಬೀದರ್‌: ನೆರೆ ಸಂತ್ರಸ್ತರಿಗೆ ಬೀದರ್‌ ತಾಲ್ಲೂಕಿನ ಘೋಡಂಪಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗಾರೆಡ್ಡಿ ನೇತೃತ್ವದಲ್ಲಿ ಅಗತ್ಯ ಆಹಾರ ಸಾಮಗ್ರಿ ಹಾಗೂ ಮಾತ್ರೆಗಳನ್ನು ಸಂಗ್ರಹಿಸಿ ಯುತ್‌ ಬ್ರಿಗೇಡ್‌ಗೆ ಹಸ್ತಾಂತರಿಸಲಾಯಿತು.

ಯುತ್ ಬ್ರಿಗೇಡ್ ಮುಖ್ಯಸ್ಥ ಮೊಂಟಿ ಮಾತನಾಡಿ, ‘ಎರಡು ದಿನಗಳ ಅವಧಿಯಲ್ಲಿ ಬೀದರ್‌ ನಗರದ ಜನತೆ ದೇಣಿಗೆ ರೂಪದಲ್ಲಿ 10 ಕ್ವಿಂಟಲ್‌ ಅಕ್ಕಿ, 5 ಕ್ವಿಂಟಲ್ ಬೇಳೆಕಾಳು, ಉಡುಪು, ಕುಡಿಯುವ ನೀರಿನ ಬಾಟಲಿ, ಔಷಧ ಹಾಗೂ ₹ 35 ಸಾವಿರ ನಗದು ನೀಡಿದ್ದಾರೆ’ ಎಂದು ತಿಳಿಸಿದರು.

‘ಆಗಸ್ಟ್‌ 22ರಂದು ಬೆಳಿಗ್ಗೆ 8 ಗಂಟೆಗೆ ಬೀದರ್‌ನಿಂದ ವಾಹನದಲ್ಲಿ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಗುವುದು. ವಾಹನದಲ್ಲಿ ಯುತ್ ಬ್ರಿಗೇಡ್‌ನ ಎಂಟು ಜನ ಸದಸ್ಯರು ತೆರಳಲಿದ್ದಾರೆ’ ಎಂದು ಹೇಳಿದರು.

ಸಾಹಿತಿ ಪಾರ್ವತಿ ವಿಜಯಕುಮಾರ ಸೋನಾರೆ ಮಾತನಾಡಿ, ‘ಕೇರಳ ಹಾಗೂ ರಾಜ್ಯದ ಕೊಡುಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪ್ರತಿಯೊಬ್ಬರು ಮಾನವೀಯ ನೆಲೆಯಲ್ಲಿ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಘೋಡಂಪಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅನಿಲ ಭುಜಂಗೆ, ರೆಹಮಾನ್, ಮೈಲೂರಿನ ಆಶಾ ಕಾರ್ಯಕರ್ತೆಯರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !