ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ರವಾನೆ

7

ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ರವಾನೆ

Published:
Updated:
Deccan Herald

ಬೀದರ್‌: ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಬೀದರ್‌ ಕಾಂಗ್ರೆಸ್‌ ಯುವ ಬ್ರಿಗೇಡ್ ವತಿಯಿಂದ ಅಗತ್ಯ ಆಹಾರ ಸಾಮಗ್ರಿಗಳನ್ನು ಕಳಿಸಿಕೊಡಲಾಯಿತು.

ಅಕ್ಕಿ, ಬ್ರೆಡ್‌, ಬಿಸ್ಕತ್‌ ಹಾಗೂ ಹಾಲಿನ ಪೌಡರ್‌ ಸಂಗ್ರಹಿಸಿ ಕಳಿಸಿಕೊಡಲಾಯಿತು. ಕೆ.ಪಿ.ಸಿ.ಸಿ ಕಾರ್ಯದರ್ಶಿ ಶಂಕರ ದೊಡ್ಡಿ, ಎಸ್‌.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಡಿ.ಕೆ, ಮಲ್ಲಿಕನಾಥ ಮಡಗೆ, ಮಾಣಿಕೇಶ ಪಾಟೀಲ, ಸಂಗಮೇಶ ಬಿರಾದಾರ, ರಾಹುಲ್ ತೂಂಗಾವ, ನವೀನಕುಮಾರ ಬಾವಿದೊಡ್ಡಿ, ಪ್ರಶಾಂತ ಭಾವಿಕಟ್ಟಿ, ವಿನಯಕುಮಾರ, ಅಭಿಷೇಕ ಇದ್ದರು.

ಮಕ್ಕಳ ಸಾಹಿತ್ಯ ಪರಿಷತ್‌:
ಬೀದರ್: ಕೊಡಗು ಮತ್ತು ಕೇರಳದ ನೆರೆ ಸಂತ್ರಸ್ತರಿಗೆ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಹಾರ ಪದಾರ್ಥ, ಬಟ್ಟೆ ಹಾಗೂ ಬೆಡ್‌ಶೀಟ್‌ಗಳನ್ನು ಕಳುಹಿಸಲಾಯಿತು.

ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಸೋನಾರೆ, ಕಾರ್ಯದರ್ಶಿ ಓಂಕಾರ ಪಾಟೀಲ, ಕವಿತಾ ಬಂಬುಳಗೆ, ಶಿವಕಾಂತಾ ಖಡಕೆ, ಅಜೀತ್‌ ಎನ್, ಅವಿನಾಶ ಸೋನೆ, ಸಿ.ಎಸ್. ನಿಖಿಲ್, ಮಹೇಶ ಮೇತ್ರೆ, ಜಸ್‌ಪ್ರೀತ್‌ಸಿಂಗ್ ಮೌಂಟಿ, ಪುಷ್ಪಕ್ ಜಾಧವ, ಸಂಗಮೇಶ ಪಾಟೀಲ, ಭಾಗೇಶ ಪಂಚಾಳ, ದೀಪಕ ಗೊಂಡ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !