ಬೀದರ್: ನಗರದ ಗಾಂಧಿ ಗಂಜ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 15 ಬೈಕ್ಗಳ ಸಮೇತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.|

ಇಲ್ಲಿನ ವಿದ್ಯಾ ನಗರದ ನಿವಾಸಿ ವಿಷ್ಣು ರಮೇಶ್ (25) ಬಂಧಿತ. 15 ಬೈಕ್ಗಳ ಒಟ್ಟು ಮೌಲ್ಯ ₹9.78 ಲಕ್ಷ ಎಂದು ಅಂದಾಜಿಸಲಾಗಿದೆ. ಜಪ್ತಿ ಮಾಡಿಕೊಂಡ ಎಲ್ಲ ಬೈಕ್ಗಳು ಹೀರೋ ಸ್ಪ್ಲೆಂಡರ್ ಪ್ಲಸ್ ಕಂಪನಿಗೆ ಸೇರಿವೆ. ಆರೋಪಿ ಈ ಕಂಪನಿಯ ಬೈಕ್ಗಳನ್ನಷ್ಟೇ ಕದಿಯುವುದನ್ನು ಚಾಳಿ ಮಾಡಿಕೊಂಡಿದ್ದ. ಬೈಕ್ ಕಳ್ಳತನ ಬಿಟ್ಟರೆ ಇತರೆ ಯಾವುದೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 19ರಂದು ಭಾಲ್ಕಿ ತಾಲ್ಲೂಕಿನ ಗಣೇಶಪೂರವಾಡಿಯ ಗಣಪತಿ ಗಂಗಾಜಿ ಅವರು ಬೀದರ್ನ ಗಾಂಧಿ ಗಂಜ್ ಎಪಿಎಂಸಿ ಮಾರ್ಕೆಟ್ನಲ್ಲಿ ಬೈಕ್ ನಿಲ್ಲಿಸಿ, ಬೀಜ ಖರೀದಿಗೆ ತೆರಳಿದ್ದರು. ವಾಪಸ್ ಬಂದಾಗ ಅವರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಅವರು ಗಾಂಧಿಗಂಜ್ ಠಾಣೆಗೆ ದೂರು ಕೊಟ್ಟಿದ್ದರು. ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಕಮಾಂಡ್ ಕಂಟ್ರೋಲ್ ರೂಮ್ ಸಹಾಯದಿಂದ ಆರೋಪಿಯನ್ನು ಅದೇ ದಿನ ಬಂಧಿಸಲಾಗಿದೆ.

ಬೀದರ್ನಲ್ಲಿ 14 ಬೈಕ್ಗಳು, ಹುಮನಾಬಾದ್ನಲ್ಲಿ 1 ಬೈಕ್ ಕಳವು ಮಾಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಗಾಂಧಿ ಗಂಜ್ ಠಾಣೆ ಪಿಐ ಆನಂದರಾವ್ ಎಸ್.ಎನ್, ಪಿಎಸ್ಐ ವಿದ್ಯಾವಾನ್, ಅಪರಾಧ ವಿಭಾಗದ ಸಿಬ್ಬಂದಿ ನವೀನ್, ಅನಿಲ್, ಇರ್ಫಾನ್, ಗಂಗಾಧರ್, ಸುಧಾಕರ್, ಹರ್ಷವರ್ಧನ್, ತುಕ್ಕಾರೆಡ್ಡಿ ಹಾಗೂ ಸಂಚಾರ ಪೊಲೀಸರ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.