ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಡ್‌ನಲ್ಲಿ ಹೋಳಿಗೆ ತುಪ್ಪದ ಜಾತ್ರೆ

ಮಹಾದಾಸೋಹಿ ರೇವಪ್ಪಯ್ಯ ಸ್ವಾಮಿಗಳ ಸ್ಮರಣೆ: ಸಚಿವ ಚವಾಣ್ ಭೇಟಿ
Last Updated 23 ಜೂನ್ 2022, 4:12 IST
ಅಕ್ಷರ ಗಾತ್ರ

ಕಮಲನಗರ: ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ ತುಪ್ಪದ ರುಚಿ ಸವಿಯುವುದೇ ಹಬ್ಬದ ವೈಶಿಷ್ಟ್ಯ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಖೇಡ್ ಗ್ರಾಮದಲ್ಲಿ ಮಂಗಳವಾರ ಜಪಯಜ್ಞ ಪೂಜಾ ಮಹೋತ್ಸವ ಮತ್ತು ನಾವದಗಿಯ ರೇವಪ್ಪಯ್ಯ ಸ್ವಾಮಿ ಗುರುಪೂಜಾ ನಿಮಿತ್ತ ಹೋಳಿಗೆ-ತಪ್ಪದ್ದೇ ಜಾತ್ರೆ ನಡೆದಿದೆ.

ಕಾರಹುಣ್ಣಿಮೆಯ ಆರನೇ ದಿನಕ್ಕೆ ಖೇಡ್ ಗ್ರಾಮದಲ್ಲಿ ಈ ದಾಸೋಹ ಅಂಗವಾಗಿ ಹೋಳಿಗೆ-ತುಪ್ಪದ ಜಾತ್ರೆ ಹದಿನೇಳು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಜಾತ್ರೆಗೆ ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜನರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಬಂದವರಿಗೆಲ್ಲಾ ಮುಂಜಾನೆಯಿಂದ ಇಳಿಹೊತ್ತಿನವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಪಡಿಸುತ್ತಾರೆ ಖೇಡ್ ಗ್ರಾಮಸ್ಥರು. ‘ಹೈದರಾಬಾದ್‍ನಿಂದ 15 ಕೆ.ಜಿ.ಯ 10 ಡಬ್ಬಿ ತುಪ್ಪ ಅಂದರೆ 150 ಕೆ.ಜಿ ಹಾಗೂ 750 ಕೆ.ಜಿ. ಕಡಲೆ ಬೇಳೆ, 750 ಕೆಜಿ.ಸಕ್ಕರೆ ಹಾಗೂ 750 ಕೆ.ಜಿ ಅಕ್ಕಿಯನ್ನು ದಾಸೋಹಕ್ಕಾಗಿ ತಂದಿದ್ದೇವೆ’ ಎಂದು ಮುಖಂಡ ಶರಣಪ್ಪ ಬಸನಾಳೆ, ಬಸವರಾಜ ಜಾಜೆ ಹಾಗೂ ವೀರೇಂದ್ರ ಬಿರಾದಾರ ತಿಳಿಸಿದ್ದಾರೆ. ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜಾತ್ರೆಗೆ ಸುಮಾರು 30 ಸಾವಿರ ಭಕ್ತಾದಿಗಳು ಸೇರಿದ್ದರು ಎಂದು ಅಂದಾಜಿಸಲಾಗಿದೆ. ಜಾತ್ರೆಗೆ ಉತ್ತರಾಖಂಡದ ಕೇದಾರನಾಥ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು ಆಗಮಿಸಿದ್ದರು. ಭಕ್ತರಿಗೆ ಕಾಯಕ ಮತ್ತು ದಾಸೋಹವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಹೋಗಬೇಕೆಂದು ಆಶೀರ್ವಚನ ನೀಡಿದರು.

ಮಹಾ ತಪಸ್ವಿ ರೇವಪ್ಪಯ್ಯ ಸ್ವಾಮಿ ಅವರ ದಾಸೋಹ ಕಾರ್ಯವನ್ನು ಹದಿನೆಂಟು ವರ್ಷಗಳಿಂದ ಖೇಡ್ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT