ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಈ ‘ಟೈಗರ್’ ಬೆಲೆ ₹50 ಲಕ್ಷ!

Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಜನವಾಡ: ಈ ‘ಟೈಗರ್’ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ ₹ 50 ಲಕ್ಷ.

ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಶುರುವಾದ ರಾಜ್ಯ ಮಟ್ಟದ ಪಶುಮೇಳದಲ್ಲಿ ಬಗದಲ್‌ನ ಪ್ರಗತಿಪರ ರೈತ ಮಹಮ್ಮದ್ ಇದ್ರಿಸ್ ಅಹಮ್ಮದ್ ಖಾದ್ರಿ ಅವರ ಮಳಿಗೆಯಲ್ಲಿ ಇರುವ ‘ಟೈಗರ್’ ಹೆಸರಿನ ಜಾಫ್ರಾಬಾದಿ ಗಿರ್ ಕೋಣ ತನ್ನ ಗಜಗಾತ್ರದಿಂದಾಗಿಯೇ ಎಲ್ಲರ ಗಮನ ಸೆಳೆಯುತ್ತಿದೆ.

6.5 ಅಡಿ ಎತ್ತರ ಹಾಗೂ 9 ಅಡಿ ಉದ್ದ ಇರುವ ಕೋಣದ ತೂಕ 13 ಕ್ವಿಂಟಲ್ ಇದೆ. ಇದರ ಹಣೆಯೇ ಮೂರು ಅಡಿ ಇದೆ. ಇದಕ್ಕೆ ನಾಲ್ಕು ಕಿವಿಗಳು ಇರುವುದು ಮತ್ತೊಂದು ವಿಶೇಷ. ಬಗದಲ್‌ನಿಂದ ಲಾರಿಯಲ್ಲಿ ಪಶು ಮೇಳಕ್ಕೆ ತರಲಾಗಿದೆ.

‘ಮಹಮ್ಮದ್ ಇದ್ರಿಸ್ ಅಹಮ್ಮದ್ ಖಾದ್ರಿ ಅವರು 8 ವರ್ಷದ ಕೋಣವನ್ನು ಸಂತಾನೋತ್ಪತ್ತಿಗಾಗಿ ಕಚ್‌ಬುಚ್‌ನಿಂದ ತಂದಿದ್ದಾರೆ. ಅವರ ಡೇರಿಯಲ್ಲಿ ಜಾಫ್ರಾಬಾದಿ ಗಿರ್ ತಳಿಯ 80 ಎಮ್ಮೆಗಳು ಇವೆ’ ಎಂದು ಹೇಳುತ್ತಾರೆ ಡೇರಿಯನ್ನು ನೋಡಿಕೊಳ್ಳುತ್ತಿರುವ ಶೇರು ಖಾದ್ರಿ.

‘ಕೋಣದ ಪ್ರತಿ ದಿನದ ಖರ್ಚು ಒಂದರಿಂದ ಒಂದೂವರೆ ಸಾವಿರ ರೂಪಾಯಿ ಇದೆ. ಇದಕ್ಕೆ ಆಹಾರವಾಗಿ ದಿನಕ್ಕೆ 24 ಮೊಟ್ಟೆ, ಕಡಲೆ ಚುನ್ನಿ, ಉದ್ದಿನ ಬೇಳೆ, ಕ್ಯಾಲ್ಶಿಯಂ ಮೊದಲಾದವುಗಳನ್ನು ಕೊಡಲಾಗುತ್ತದೆ. ಹೊರಗಿನವರು ಸಂತಾನೋತ್ಪತ್ತಿಗಾಗಿ ಎಮ್ಮೆಯನ್ನು ತಂದರೆ ಒಂದಕ್ಕೆ ₹ 5 ಸಾವಿರ ಶುಲ್ಕ ಇದೆ’ ಎಂದು ತಿಳಿಸುತ್ತಾರೆ.

‘ಪಂಜಾಬ್‌ನವರು ಕೋಣವನ್ನು ₹ 40 ಲಕ್ಷಕ್ಕೆ ಕೇಳಿದ್ದರು. ಆದರೆ, ಕೊಟ್ಟಿಲ್ಲ. ಈಗ ಇದರ ಬೆಲೆ ₹50 ಲಕ್ಷ ಇದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT