ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುಭಾಷ್ ವೆಂಕಟರಾವ ಲಾಂಡಗೆ ಹಾಗೂ ಉಪಾಧ್ಯಕ್ಷರಾಗಿ ಸುರೇಖಾ ತಾನಾಜಿ ಹಾರಕೂಡೆ ಅವಿರೋಧವಾಗಿ ಆಯ್ಕೆಯಾದರು.

ಸಂಘದ 12 ನಿರ್ದೇಶಕ ಸ್ಥಾನಗಳಿಗೆ ಮೇ 1ರಂದು ಚುನಾವಣೆ ನಡೆದಿತ್ತು. ಅದರ ಮುಂದುವರಿದಂತೆ ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ನಾಮಪತ್ರ ಪರಿಶೀಲನೆ ಹಾಗೂ ಅಂತಿಮ ಪ್ರಕ್ರಿಯೆಯ ಬಳಿಕ ಎರಡೂ ಹುದ್ದೆಗಳಿಗೆ ಅವಿರೋಧ ಆಯ್ಕೆ ಘೋಷಿಸಲಾಯಿತು.

ಚುನಾವಣಾಧಿಕಾರಿ ಸಯ್ಯದ್ ಖುದ್ದುಸ್ ಮಾತನಾಡಿ, ‘ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ನಿಯಮಾನುಸಾರ ನಡೆಯಿತು. ಸದಸ್ಯರ ಸಹಕಾರದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಪೂರ್ಣಗೊಂಡಿದೆ’ ಎಂದು ಹೇಳಿದರು.

ಸಂಘದ ಸದಸ್ಯರಾಗಿ ಚತುರ್ಭುಜ ನಾಮದೇವ, ಬಜರಂಗ ವೆಂಕಟರಾವ್, ದೇವಿದಾಸ ಪ್ರಲ್ಹಾದ, ಹನುಮಂತ ಪಾಂಡು, ಭಾಮಬಾಯಿ ಬಾಬುರಾವ್, ಧನಾಜಿ ಜಟಿಂಗರಾವ್, ಖಂಡೂ ರಾಮಚಂದ್ರ, ಹುಸೇನಸಾಬ್ ಮೈನುದ್ದೀನ್, ಭಗವಾನ್ ಮಾಣಿಕಪ್ಪ ಗಂದಗೆ ಹಾಗೂ ಅಮೋಲ್ ಅಣ್ಣರಾವ ಅವರು ಆಯ್ಕೆಯಾದರು.

ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸೇರಿ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಸಹಾಯಕ ಚುನಾವಣಾಧಿಕಾರಿ ಶಿವಾನಂದ ಹಡಪದ, ಕಾಂಗ್ರೆಸ್ ಮುಖಂಡರಾದ ಪ್ರವೀಣ ಹಣಮಶೆಟ್ಟಿ, ಶರದ ಗಂದಗೆ, ದಿಲೀಪ್ ಪಾಟೀಲ, ಗುಂಡಪ್ಪ ಗಂದಗೆ, ಗೋಪಾಲ ಸೂರ್ಯವಂಶಿ, ಸಂಜು ಕಾಸರ, ಗಣಪತ ಪಾಟೀಲ, ಮಾಧವ ಬೋರೋಳೆ, ಬಂಡು ಲಾಂಡಗೆ, ಮನೋಜ್ ಪಿನಾಟೆ, ಬಾಳು ಕಾಸರ್, ದತ್ತಾ ಭಾಡಸಿಂಗೆ, ಅಮರ ಗಂದಗೆ, ಕಿಶನ್ ಫುಲೆ, ಸಂಜು ಪೊಲೀಸ್ ಪಾಟೀಲ, ಗೋವಿಂದ ಕಲ್ಯಾಣಕರ, ಮನೋಹರ ಕಾಳೆ, ಸುರೇಶ ಸೂರ್ಯವಂಶಿ, ಪಿಎಸ್ಐ ಸುದರ್ಶನರೆಡ್ಡಿ, ಏಎಸ್ಐ ಚಂದ್ರಕಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-33-495410965

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.