ಹುಲಸೂರ: ಬೇಸಿಗೆಯ ತೀವ್ರ ಬಿಸಿಲಿನಿಂದ ನೀರಿನ ಮೂಲಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿ ಹಾಗೂ ಪ್ರಾಣಿಗಳ ದಾಹ ನೀಗಿಸಲು ರಾಮಾನಂದಚಾರ್ಯ ಹಾಗೂ ನರೇಂದ್ರ ಚಾರ್ಯ ದಕ್ಷಿಣ ಪೀಠ ನಾಣೇಜ್ ಧಾಮದ ಭಕ್ತರು ಪಟ್ಟಣದ ಹೊರವಲಯದ ಜಮೀನುಗಳಲ್ಲಿ ಕುಡಿಯುವ ನೀರಿನ ಗುಂಡಿಗಳನ್ನು ನಿರ್ಮಿಸಿದ್ದಾರೆ.

ಪಟ್ಟಣದಲ್ಲಿ ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ನೀರಿನ ಕೊರತೆಯಿಂದ ಪಕ್ಷಿ–ಪ್ರಾಣಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಇದನ್ನು ಮನಗಂಡ ಭಕ್ತರು ಚನ್ನಪ್ಪ ಭೋಪಳೆ ಹಾಗೂ ಶಿವಾಜಿ ಭೂಸಾರೆ ಅವರ ಜಮೀನುಗಳಲ್ಲಿ ಗುಂಡಿ ತೋಡಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ.

ಈ ಮೂಲಕ ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿರುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸೇವಾಕಾರ್ಯದಲ್ಲಿ ರೋಹಿದಾಸ ವತಾರೆ, ವೆಂಕಟ ಸಾಯಗಾಂವೆ, ಶಿವಾಜಿ ಭೂಸಾರೆ, ದಿಲೀಪ ವಾಲೆ, ಕಿಶನ್ ಗಾಯಕವಾಡ, ಚನ್ನಪ್ಪ ಭೋಪಳೆ, ಅನೀಲ ವಾಲೆ, ಸಂಜೀವ ರಾಸೂರೆ, ಸಂಜೀವ ಟೊಂಪೆ, ರಮೇಶ ಹಂದಿಕೆರೆ, ನಾಗೇಶ ಭೋಪಳೆ, ದಯಾನಂದ ಗಾಯಕವಾಡ, ರಾಮ ಸೊಲಂಕೆ, ಮಹಾದೇವಿ ತೆಲಂಗಾಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-33-843656863

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.