ಹುಲಸೂರ: ತಾಲ್ಲೂಕಿನ ಬೇಲೂರು ಗ್ರಾಮದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ, ನಂದಿಕೋಲು ಹಾಗೂ ಕುಂಭ ಮೆರವಣಿಗೆ ವೈಭವದಿಂದ ಜರುಗಿತು. ಮೆರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು.

ಬೇಲೂರು ಕಲ್ಯಾಣ ಕಟ್ಟಿಮನಿ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಈ ಉತ್ಸವ, ಗ್ರಾಮದ ನಾಗಲಿಂಗೇಶ್ವರ ದೇವಾಲಯದ ಸಮ್ಮುಖದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ, ಸಿದ್ದರಾಮೇಶ್ವರ ದೇವಾಸ್ಥಾನದ ಗರ್ಭಗುಡಿಯಲ್ಲಿ ಸಮಾಪ್ತಿಯಾಯಿತು.

ಮೆರವಣಿಗೆಯಲ್ಲಿ ಮೈಸೂರು ವೀರಗಾಸೆ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಮಹಿಳೆಯರ ಕೋಲಾಟ ಹಾಗೂ ಕುಂಭ ಹೊತ್ತು ಸಾಗಿದ ಭಕ್ತರ ದೃಶ್ಯಗಳು ಗಮನಸೆಳೆದವು. ದಾರಿಯುದ್ದಕ್ಕೂ ‘ಸಿದ್ದರಾಮೇಶ್ವರರ ಜಯ’ ಘೋಷಣೆಗಳು ಮೊಳಗಿದವು. ಜಾತ್ರಾ ಮಹೋತ್ಸವದ ಅಂಗವಾಗಿ ಭಾಗವಹಿಸಿದ ಕಲಾವಿದರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಬಸವಕಲ್ಯಾಣ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜ್ಞಾನೇಶ್ವರ ಮೂಳೆ, ಸಿದ್ರಾಮ ಕಾಮಣ್ಣ, ಸೂರ್ಯಕಾಂತ ಚಿಲ್ಲಾಬಟೆ, ಸಿದ್ದು ಪಾಟೀಲ, ಶರಣಯ್ಯ ಸ್ವಾಮಿ, ನಿತ್ಯಾನಂದ ಸ್ವಾಮಿ, ದೇವಾಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ ಮೆಂಡೋಳೆ, ಉಪಾಧ್ಯಕ್ಷ ದೇವಿಂದ್ರ ಉದಾನೆ, ಚನ್ನವೀರ ಸ್ವಾಮಿ, ರಾಜಪ್ಪ ಪಾಟೀಲ್, ನಾಗನಾಥ ಭೇಟಿ, ಸಂಗಪ್ಪ ಜವಳಗೆ, ಮೊಡಳಪ್ಪ ಗುಂಡರೆ, ಮೊಡಳಪ್ಪ ಹೊಳ್ಳೆ, ರಾಜು ಸ್ವಾಮಿ, ಹರ್ಷವರ್ಧನ್ ಅಳ್ಳೆ, ಹುಲೆಪ್ಪ ಪಾಟೀಲ, ಮಹಾದೇವ ಮಹಾಜನ, ಪಪ್ಪು ಉದಾನೆ, ಸಂತೋಷ ವಕಾರೆ, ಸಂದೀಪ ಬಿರಾದಾರ, ಭೀಮಣ್ಣ ಗೋದಹಿಪರಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-33-533549220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.