ಹುಲಸೂರ: ಸಾರಿಗೆ ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಪ್ರಯಾಣಿಕರೊಬ್ಬರು ಬಸ್ನಲ್ಲಿ ಮರೆತು ಹೋಗಿದ್ದ ನಗದು ಹಾಗೂ ಬೆಳ್ಳಿಯ ಆಭರಣ ಇರುವ ಚೀಲವನ್ನು ಸುರಕ್ಷಿತವಾಗಿ ಮರಳಿ ನೀಡಿದ ಘಟನೆ ಶುಕ್ರವಾರ ನಡೆದಿದೆ.

ದೇವಣಿ ತಾಲ್ಲೂಕಿನ ಚಾವನ್ಹಿಪ್ಪರ್ಗ ಗ್ರಾಮದ ಮಶೀದ್ ಅಲಾವುದ್ದೀನ್ ಶೇಖ್ ಹಾಗೂ ಪುತ್ರಿ ಅಸ್ಮತಾಬಿ ಹೈದರ್ ಶೇಖ್ ಅವರು ಬೆಳಿಗ್ಗೆ ಬಸವಕಲ್ಯಾಣದಿಂದ ವಾಲಂಡಿಗೆ ಪ್ರಯಾಣಿಸಿದ್ದರು. ವಾಲಂಡಿಯಲ್ಲಿ ₹7,100 ನಗದು ಹಾಗೂ ಐದು ತೊಲೆ ಬೆಳ್ಳಿಯ ಸರ ಹೊಂದಿದ್ದ ಚೀಲವನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದಾರೆ.

ನಂತರ ಬಸ್ನಲ್ಲಿ ಚೀಲ ಬಿಟ್ಟಿರುವುದಾಗಿ ಬಸವಕಲ್ಯಾಣ ಡಿಪೊ ಅಧಿಕಾರಿಗೆ ತಿಳಿಸಿದ್ದಾರೆ. ನಂತರ ಬಸ್ ಚಾಲಕ ಬಜರಂಗ ಹಾಗೂ ನಿರ್ವಾಹಕ ವೀರಪ್ಪ ಕಾಳೆ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಸಿಬ್ಬಂದಿ ಬಸ್ನ್ನು ಪರಿಶೀಲಿಸಿ ಚೀಲವನ್ನು ಪತ್ತೆಹಚ್ಚಿದರು.

ಬಳಿಕ ಬಸ್ ಎರಡನೇ ಸುತ್ತಿನಲ್ಲಿ ವಾಲಂಡಿಗೆ ಮರಳಿದಾಗ, ಚೀಲದಲ್ಲಿದ್ದ ನಗದು ಮತ್ತು ಬೆಳ್ಳಿಯ ಸರವನ್ನು ಶೇಖ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಹಸನ್ ಮೊಮಿನ್, ರಾಷ್ಟ್ರಸೇವಾದಳದ ಹಿರಿಯ ಕಾರ್ಯಕರ್ತ ಅಂಕುಶ್ ಗಾಯಕ್ವಾಡ್, ರಾಮದಾಸ್ ಬನ್ಸೋಡೆ, ಅರುಣ್ ಪಾಟೀಲ, ಸುಶಾಂತ್ ಸಪಾನೆ ಸೇರಿದಂತೆ ಹಲವರು ಚಾಲಕ ಮತ್ತು ನಿರ್ವಾಹಕರನ್ನು ಅಭಿನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-33-1871500199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.