ಹುಲಸೂರ: ತಾಲ್ಲೂಕಿನ ಗೋರಟಾ(ಬಿ) ಗ್ರಾಮದ ರೈತ ರಮೇಶ ಅವರಿಂದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಪಿಂಪ್ರಿ ಗ್ರಾಮದ ರೈತ ಸತೀಶ ಬಾಳಾಸಾಹೇಬ ಭೀಮಷೆ ಅವರು ಖರೀದಿಸಿದ್ದ ಸುಮಾರು 3 ಸಾವಿರ ಜೋಳದ ಸೂಡು ಟ್ರ್ಯಾಕ್ಟರ್ನಲ್ಲಿ ಸಾಗಿಸು ವಾಗ ಸೋಮವಾರ ಸಂಜೆ ವಿದ್ಯುತ್ ತಂತಿ ಸ್ಪರ್ಶಿಸಿ, ಬೆಂಕಿಗಾಹುತಿಯಾಗಿದೆ.

ಗೋರಟಾ(ಬಿ) ಗ್ರಾಮದಿಂದ ಹಾಲಹಳ್ಳಿ ಮಾರ್ಗವಾಗಿ ಸಾಗುತ್ತಿದ್ದ 2 ಟ್ರಾಲಿಯ ಟ್ರ್ಯಾಕ್ಟರ್, ಹುಲಸೂರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಟ್ರಾಲಿಯಲ್ಲಿದ್ದ ಜೋಳದ ಸೂಡು ಮೇಲಿನಿಂದ ಹಾದುಹೋಗುತ್ತಿದ್ದ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತು.

ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಚಾಲಕನಿಗೆ ಮಾಹಿತಿ ನೀಡಿದರು. ಕೂಡಲೇ ಚಾಲಕ ಟ್ರ್ಯಾಕ್ಟರ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ, ಇಂಜಿನ್ ಅನ್ನು ಟ್ರಾಲಿಯಿಂದ ಬೇರ್ಪಡಿಸಿದ್ದರಿಂದ ಅನಾಹುತ ತಪ್ಪಿತು.

ಇದೇ ವೇಳೆ, ಎರಡೂ ಟ್ರಾಲಿಗಳಲ್ಲಿದ್ದ ಜೋಳದ ಸೂಡು ಧಗಧಗನೆ ಹೊತ್ತಿ ಉರಿಯತೊಡಗಿತು. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವುದರೊಂದಿಗೆ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರೂ, ಅಷ್ಟರಲ್ಲೇ ಜೋಳದ ಸೂಡು ಸಂಪೂರ್ಣ ಸುಟ್ಟುಹೋಗಿತ್ತು.

ಘಟನೆಯಿಂದ ರೈತ ಸತೀಶ ಬಾಳಾಸಾಹೇಬ ಭೀಮಷೆ ಅವರಿಗೆ ಸುಮಾರು ₹30 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕು ಕೇಂದ್ರದ ಹಲವೆಡೆ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಮುಖ್ಯರಸ್ತೆಗಳ ಮೇಲೆಯೇ ತಂತಿಗಳು ತಗ್ಗಿ ವಾಹನಗಳಿಗೆ ತಾಗುತ್ತಿರುವ ಹಿನ್ನೆಲೆ, ಜೆಸ್ಕಾಂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ವಿದ್ಯುತ್ ತಂತಿಗಳನ್ನು ಬಿಗಿಗೊಳಿಸುವುದಲ್ಲದೆ ಅಗತ್ಯವಿದ್ದಲ್ಲಿ ರಕ್ಷಣಾತ್ಮಕ ಪೈಪ್ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.