ಹುಲಸೂರ: ತಾಲ್ಲೂಕಿನ ಕದೇಪುರ ಗ್ರಾಮದಲ್ಲಿ 18ನೇ ವಾರ್ಷಿಕ ನಿರಂತರ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥರಾಜ್ ಜ್ಞಾನೇಶ್ವರಿ ಪಾರಾಯಣ ಸಮಾರಂಭ ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. ವಾರಪೂರ್ತಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಆಧ್ಯಾತ್ಮಿಕ ವಾತಾವರಣ ಹೆಚ್ಚಿಸಿದವು.

ಕಾರ್ಯಕ್ರಮದ ಅಂಗವಾಗಿ ಸದ್ಗುರು ಗುರುಬಾಬಾ ಮಹಾರಾಜ್ ಔಸೇಕರ್ ಅವರ ನೇತೃತ್ವದಲ್ಲಿ ನಡೆದ ಚಕ್ರಿ ಭಜನೆ ವಿಶೇಷ ಆಕರ್ಷಣೆಯಾಯಿತು. ಭಕ್ತರು ವೃತ್ತಾಕಾರವಾಗಿ ನಿಂತು, ತಾಳಮದ್ದಳೆಗಳ ಜೊತೆಗೆ ಒಂದೇ ಲಯದಲ್ಲಿ ಹರಿನಾಮವನ್ನು ಗಾಯನ ಮಾಡುತ್ತಾ ಭಕ್ತಿ ಭಾವದಲ್ಲಿ ತಲ್ಲೀನರಾದರು. ಈ ಚಕ್ರಿ ಭಜನೆ ಕೇವಲ ಭಕ್ತಿಗಾನವಾಗಿರದೆ, ಸಮೂಹದಲ್ಲಿ ಏಕತೆ, ಶ್ರದ್ಧೆ ಮತ್ತು ಆತ್ಮಸಾಕ್ಷಾತ್ಕಾರದ ಸಂಕೇತವಾಗಿ ಕಾಣಿಸಿಕೊಂಡಿತು. ಭಜನೆ ನಡೆಯುವ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ನಂತರ ಪಂಢರಪುರದ ಏಕನಾಥ ಮಹಾರಾಜ ಹಂದೆ ಅವರು ಕೀರ್ತನೆ ನಡೆಸಿ, ಭಕ್ತರಿಗೆ ಧಾರ್ಮಿಕ ಸಂದೇಶಗಳನ್ನು ನೀಡಿದರು. ಜೀವನದಲ್ಲಿ ಸತ್ಪಥ, ನೈತಿಕತೆ ಹಾಗೂ ಭಗವಂತನ ಭಕ್ತಿ ಮಹತ್ವವನ್ನು ವಿವರಿಸಿದರು.

‘ಈ ಅಖಂಡ ಹರಿನಾಮ ಸಪ್ತಾಹಕ್ಕೆ ಸ್ಥಳೀಯ ಶಾಸಕ ಶರಣು ಸಲಗರ ಭೇಟಿ ನೀಡಿ ಭಕ್ತರಿಗೆ ಶುಭಾಶಯ ಕೋರಿದರು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಮೌಲ್ಯಗಳನ್ನು ಬಲಪಡಿಸುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆ ಭೀಮ್ ಪಾಟೀಲ್ ಮತ್ತು ಸಂದೀಪ ಬಿರಾದಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಶಿಸ್ತಿನಿಂದ ನಡೆದವು. ಗೋವಿಂದ ಮಹಾರಾಜ್, ತಾನಾಜಿ ಮುಳೆ, ಜ್ಞಾನೋಬ ಬಿರಾದಾರ್, ರಾಜಕುಮಾರ ಬಿರಾದಾರ್, ಪ್ರದೀಪ್ ಬಿರಾದಾರ್, ದಯಾನಂದ ಬಿರಾದಾರ್, ಪ್ರಶಾಂತ ಬೋರೋಲೆ, ಗುಂಡಪ್ಪ ಪಾಂಚಾಲ್, ಕಿಶೋರ ಬಿರಾದಾರ್ ಸೇರಿದಂತೆ ಅನೇಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-33-987143138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.