ಹುಲಸೂರ : ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ನಡೆದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದ ಕೊನೆಯ ದಿನ ಧರ್ಮಸಭೆ ಭಕ್ತಿಭಾವ ಮತ್ತು ಧಾರ್ಮಿಕ ಉತ್ಸಾಹದ ವಾತಾವರಣದಲ್ಲಿ ನೆರವೇರಿತು.

ಧರ್ಮಸಭೆಗೆ ಸಾನ್ನಿಧ್ಯ ವಹಿಸಿದ್ದ ತಡೋಳದ ರಾಜಶೇಖರ ಶಿವಾಚಾರ್ಯರು ಮಾತನಾಡಿ, ‘ಈ ಗ್ರಾಮವು ತಮ್ಮೊಂದಿಗೆ ಬಹಳ ಆತ್ಮೀಯ ಸಂಬಂಧ ಹೊಂದಿದ್ದು, ಅನಾದಿಕಾಲದಿಂದಲೇ ಇಲ್ಲಿ ಸಿದ್ದರಾಮೇಶ್ವರ ಜಾತ್ರೆಯನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ’ ಎಂದು ಹೇಳಿದರು.

‘ಯುವಕರು ವ್ಯಸನಗಳಂತಹ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನವನ್ನು ಶ್ರೇಷ್ಠವಾಗಿ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಕೆಎಎಸ್ ಅಧಿಕಾರಿ ಸಾವಿತ್ರಿ ಸಲಗರ ಅವರು ಮಾತನಾಡಿ, ‘ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಹಾಗೂ ಸಮಾಜದ ಕುರಿತು ಅರಿವು ಮೂಡಿಸಬೇಕು’ ಎಂದರು.

ಕರ್ನಾಟಕ ನೀರಾವರಿ ಇಲಾಖೆಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿದರು..

ವೇದಿಕೆಯಲ್ಲಿ ಬೇಲೂರು ಕಲ್ಯಾಣ ಕಟ್ಟಿಮನಿ ಮಠದ ಪ್ರಭುಕುಮಾರ ಶಿವಾಚಾರ್ಯರು, ಗಡಿಗೊಂಡಗೌಂವ ಪಿಕೆಪಿಎಸ್ ಅಧ್ಯಕ್ಷ ಹರ್ಷಂತ ಅಳೆ, ಉಪಾಧ್ಯಕ್ಷ ಗುರುನಾಥ ಹಲ್ಲಿಂಗೆ, ಬಸವೇಶ್ವರ ದೇವಸ್ಥಾನದ ನೂತನ ನಿರ್ದೇಶಕ ಸುನಿಲ್ ರಾಯವಡೆ, ವಿರಶೇಟಿ ಮಲಶೇಟಿ, ದೇವಸ್ಥಾನದ ಗೌರವಾಧ್ಯಕ್ಷ ಚೆನ್ನವೀರ ಸ್ವಾಮಿ ಹಾಗೂ ಅಧ್ಯಕ್ಷ ಪ್ರಕಾಶ ಮೆಂಡೊಳೆ ಉಪಸ್ಥಿತರಿದ್ದರು. ಬಸವರಾಜ ಗುಂಗೆ ಕಾರ್ಯಕ್ರಮವನ್ನು ನಿರೂಪಿಸಿದರು.

ಧರ್ಮಸಭೆಯ ನಂತರ ಎಲ್ಲರೂ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಸಿದ್ದರಾಮೇಶ್ವರ ರಥೋತ್ಸವ ಸಂಭ್ರಮದಿಂದ ನಡೆಯಿತು. ‘ಸಿದ್ದರಾಮೇಶ್ವರ ಮಹಾರಾಜ ಕಿ ಜೈ’ ಎಂಬ ಘೋಷಣೆಗಳಿಂದ ವಾತಾವರಣ ಮೊಳಗಿತು. ಭಕ್ತರು ರಥದ ಕಡೆಗೆ ಸಕ್ಕರೆ, ಖಾರಿಖ್, ಬಾಳೆಹಣ್ಣು ಹಾಗೂ ನಾಣ್ಯಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-33-567720311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.