ಹುಮನಾಬಾದ್: ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದ ಜನರಿಗೆ ಬೀದಿ ನಾಯಿಯೊಂದರ ದಾಳಿಯಿಂದ ಹಸುಕುಸೊಂದು ಮೃತಪಟ್ಟಿರುವ ವಿಷಯ ತಿಳಿದ ಗ್ರಾಮಸ್ಥರಿಗೆ ಶನಿವಾರದ ಬೆಳಗಿನ ಜಾವ ಆಘಾತವೇ ಉಂಟು ಮಾಡಿತ್ತು.

ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ದಿ. 9ರಂದು ಬೆಳಗಿನ ಜಾವ ಬೀದಿ ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಂಡು ಐದು ತಿಂಗಳ ಮಗು ಮೃತಪಟ್ಟಿದೆ. ಗ್ರಾಮದ ನಿವಾಸಿಗಳಾದ ಸಿದ್ದಪ್ಪ ಸುಧಾ ಎಂಬ ದಂಪತಿಗೆ ಸೇರಿದ (ಶಿವಾನಿ) ನಾಲ್ಕನೇ ಮಗಳು. ನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕಂಡಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಎಂದಿನಂತೆ ಮಗುವನ್ನು ಮನೆಯ ಪಡಸಾಲೆಯಲ್ಲಿ ಮಲಗಿಸಿ ಮನೆಯೊಳೆಗೆ ಹೋಗಿದ್ದ ಕೆಲವೇ ನಿಮಿಷಗಳಲ್ಲಿ ಮಲಗಿದ್ದ ಮಗು ಏಕಾಏಕಿ ಜೋರಾಗಿ ಕೀರುಚುತ್ತಿರುವ ಶಬ್ದ ಕೇಳಿಸಿತು. ತಕ್ಷಣ ಮನೆಯ ಒಳಗಿನಿಂದ ಗಾಬರಿಯಾಗಿ ಓಡೋಡಿ ಬರುವಷ್ಟರಲ್ಲಿ ಬೀದಿ ನಾಯಿ ಮಗುವಿನ ಮೇಲೆ ದಾಳಿ ಮಾಡಿ ತಲೆ, ಮುಖ ಸೇರಿದಂತೆ ದೇಹದ ಹಲವು ಕಡೆಗಳಲ್ಲಿ ಗಂಭೀರವಾಗಿ ಗಾಯಗೋಳಿಸಿತು ಎಂದು ತಾಯಿ ಸುಧಾ ಅವರು ಮಗಳನ್ನು ನೆನಪಿಸಿಕೊಂಡ ಪರಿ ಇದು.

ಗ್ರಾಮದಲ್ಲಿ ನಾಯಿಗಳ ಹಾವಳಿ: ಗ್ರಾಮದಲ್ಲಿ ಕಳೆದ ಐದಾರು ತಿಂಗಳಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಗ್ರಾಮದ ಯಾವುದೇ ರಸ್ತೆಗೆ ಹೋದರು ಸಹ ಅಲ್ಲಿ ಮೂರ್ನಾಲ್ಕು ನಾಯಿಗಳ ಹಿಂಡು ಕಂಡು ಬರುತ್ತಿವೆ. ಗ್ರಾಮದ ಐತಿಹಾಸಿಕ ಭವಾನಿ ಮತ್ತು ಸಂಗಮೇಶ್ವರ ದೇವಸ್ಥಾನಗಳಲ್ಲೂ ಇವುಗಳ ಕಾಟ ತಪ್ಪಿದಲ್ಲ.

ಇಲ್ಲಿಯ ಬಸವೇಶ್ವರ ವೃತ್ತ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತ ಸೇರಿದಂತೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜನರು ಓಡಾಡಲು ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿಗಳ ಕಾಟ ಹೆಚ್ಚಾಗಿದೆ, ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಸಹ ಕಷ್ಟವಾಗಿದೆ. ಹೀಗಾಗಿ ಇವುಗಳ ನಿಯಂತ್ರಣ ಮಾಡಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಗ್ರಾಮದಲ್ಲಿನ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-33-1291463555

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.