ಹುಮನಾಬಾದ್: ಪಟ್ಟಣದ ಹೊರವಲಯದ ಹಳೆ ಆರ್ಟಿಒ ಚೆಕ್ ಪೋಸ್ಟ್ ಹತ್ತಿರದ ಹುಮನಾಬಾದ್–ಕಲಬುರ್ಗಿ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 50ರಲ್ಲಿ ಉರಿಯದ ಬೀದಿ ದೀಪಗಳಿಂದ ಸಾರ್ವಜನಿಕರಿಗೆ ರಾತ್ರಿ ಸಂಚಾರ ಕಷ್ಟವಾಗಿದೆ. ಬೀದಿ ದೀಪಗಳು ಸರಿಯಾಗಿ ಉರಿಯದ ಕಾರಣ ಜನ ಸಂಚರಿಸಲು ಪರದಾಡುವಂತಾಗಿದೆ.

ಕಳೆದ ಕೆಲ ತಿಂಗಳಿಂದ ಈ ರಸ್ತೆಯಲ್ಲಿರುವ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಈ ರಸ್ತೆಯು ಹುಮನಾಬಾದ್ ಕೈಗಾರಿಕಾ ಪ್ರದೇಶದಿಂದ ಹಾದುಹೋಗಿದೆ. ಇದರ ಸುತ್ತಮುತ್ತಲೂ ನೂರಾರು ಕಾರ್ಖಾನೆಗಳು, ಕರ್ನಾಟಕ ಸಾರಿಗೆ ಸಂಸ್ಥೆಯ ತರಬೇತಿ ಕೇಂದ್ರ, ಐಟಿಐ ಮತ್ತು ಜಿಟಿಸಿಸಿ ಕಾಲೇಜುಗಳಿವೆ. ಪ್ರತಿನಿತ್ಯ ಸಾವಿರಾರು ಕಾರ್ಮಿಕರು, ವಿದ್ಯಾರ್ಥಿಗಳು, ನೌಕರರು ಓಡಾಡುತ್ತಾರೆ. ಅಲ್ಲದೇ ಈ ರಸ್ತೆಯು ಬಸವಕಲ್ಯಾಣ, ಬೀದರ್, ಹೈದ್ರಾಬಾದ್ ನಗರಗಳ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕಾರಣ ರಾತ್ರಿಯೂ ಈ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚು. ಆದರೆ ರಾತ್ರಿ ಬೀದಿ ದೀಪಗಳು ಉರಿಯದ ಕಾರಣ ಓಡಾಟಕ್ಕೆ ತೊಂದರೆಯಾಗಿದೆ ಎನ್ನುತ್ತಾರೆ ಸವಾರರು.

ಕತ್ತಲಲ್ಲಿ ಓಡಾಡಲು ಭಯ: ಬೀದಿದೀಪ ಗಳಿಲ್ಲದ ಕಾರಣ ಸಾರ್ವಜನಿಕರು ಇಲ್ಲಿ ಸಂಚರಿಸಲು ಭಯ ಪಡುತ್ತಾರೆ. ಕಳ್ಳತನ ಸೇರಿದಂತೆ ಮೊದಲಾದ ದುಷ್ಕೃತ್ಯಗಳ ಕುರಿತು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎನ್ನುತ್ತಾರೆ ವಾಹನ ಸವಾರ ಸತೀಶ್.

ಬೀದಿ ದೀಪಗಳು ಸರಿಯಾಗಿ ಉರಿಯದೆ ಹೋದರೆ ಸಾರ್ವಜನಿಕರು ಹೇಗೆ ಓಡಾಡಬೇಕು? ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ ಎಂದು ಕಾರ್ಮಿಕ ನಾಗೇಶ ಆಗ್ರಹಿಸಿದ್ದಾರೆ.

ರಾತ್ರಿಯ ಸಮಯದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ಬೀದಿ ದೀಪ ಇಲ್ಲದಿರುವ ಕಾರಣ ಜನರ ಪಾಡು ಹೇಳತೀರದಾಗಿದೆ. ಕೆಟ್ಟ ಬೀದಿದೀಪಗಳ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತೆ ಎಂದು ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.