ಬುಧವಾರ, ಅಕ್ಟೋಬರ್ 27, 2021
21 °C
ಹುಮನಾಬಾದ್ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿ ಬಳಕೆ ವಿವರ

ಹುಮನಾಬಾದ್: ಹೈಮಾಸ್ಟ್, ಸಮುದಾಯ ಭವನಕ್ಕೆ ಆದ್ಯತೆ

ಗುಂಡು ಅತಿವಾಳ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಸ್ಥಳೀಯ ಕಾಂಗ್ರೆಸ್‌ ಶಾಸಕ ರಾಜಶೇಖರ ಪಾಟೀಲ ಅವರ ಶಾಸಕರ ಪ್ರದೇಶ ಅಭಿವೃದ್ಧಿಯ ಬಹುತೇಕ ಅನುದಾನವನ್ನು ಹೈಮಾಸ್ಟ್ ಅಳವಡಿಕೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬಳಸಲಾಗಿದೆ.

ರಾಜಶೇಖರ ಪಾಟೀಲ ಅವರು ಅನುದಾನ ಬಳಕೆಗೆ ಪ್ರಸ್ತಾವಗಳನ್ನು ಸಲ್ಲಿಸಿದರೂ ಸರ್ಕಾರದಿಂದ ವಿಳಂಬ ವಾಗಿ ಹಣ ಬಿಡುಗಡೆಯಾದ ಕಾರಣ ಹಾಗೂ ಅಧಿಕಾರಿಗಳ ನಿಧಾನ ಕೆಲಸದಿಂದ ಎರಡು ವರ್ಷಗಳ ಹಿಂದಿನ ಅನೇಕ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ.

2019- 2020ರಲ್ಲಿ ₹ 167 ಕೋಟಿ ಅಂದಾಜು ವೆಚ್ಚದ 29 ಕಾಮಗಾರಿಗಳಲ್ಲಿ 23 ಕಾಮಗಾರಿಗಳಿಗೆ ಮಾತ್ರ ಮಂಜೂರಾತಿ ನೀಡಲಾಗಿದೆ.

ಕಂದಗೂಳದ ಬಿ.ಆರ್.‌ ಅಂಬೇಡ್ಕರ್ ಪ್ರತಿಮೆ ಸಮೀಪದ ₹ 3 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ, ಬೀದರ್‌ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ₹ 10 ಲಕ್ಷ, ಕುಡಂಬಲ್‌ ಮುಖ್ಯ ರಸ್ತೆಯಿಂದ ಬೀರಲಿಂಗ ದೇಗುಲದ ವರೆಗೆ ರಸ್ತೆ ನಿರ್ಮಾಣ, ವಳಖಿಂಡಿ ಗ್ರಾಮದಿಂದ ಮುದ್ನಾಳ ಗ್ರಾಮದವರೆಗೆ ರಸ್ತೆ ನಿರ್ಮಾಣ, ಮೊಳಕೇರಾ ಗ್ರಾಮದ ಲಕ್ಷ್ಮಿ ದೇಗುಲದ ಎದುರುಗಡೆ ಹಾಗೂ ಹಂದಿಕೇರಾ ಕನಕದಾಸ ವೃತ್ತದಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆಗೆ ಅನುದಾನ ಬಳಕೆ ಮಾಡಲಾಗಿದೆ.

2020-21ನೇ ಸಾಲಿನ ಅನುದಾನದಲ್ಲಿ ಶಾಮತಾಬಾದ್‌ ಗ್ರಾಮದ ಮರಗೆಮ್ಮ ಸರ್ಕಾರಿ ಸಮುದಾಯ ಭವನದ ಉಳಿದ ಕಾಮಗಾರಿ, ಮೊಳಕೇರಾದಲ್ಲಿ ಹೈಮಾಸ್ಟ್, ವಡ್ಡನಕೇರಾ ಗ್ರಾಮದಲ್ಲಿ ಸಮುದಾಯ ಭವನ, ಯಲ್ಲಮ್ಮ ದೇವಸ್ಥಾನಕ್ಕೆ ಸಮುದಾಯ ಭವನ, ಕಂದಗೂಳ ಬಸವಲಿಂಗ ಆಶ್ರಮದ ಸಮುದಾಯ ಭವನ ಮುಂದುವರಿದ ಕಾಮಗಾರಿ, ಸೋನಕೇರಾ, ಸಕ್ಕರಗಂ ಜವಾಡಿ, ಮದರಗಾಂವನಲ್ಲಿ ಸಮುದಾಯ ಭವನಕ್ಕೆ ಅನುದಾನ ಒದಗಿಸಲಾಗಿದೆ.

ಪೂರ್ಣಗೊಳ್ಳದ 17 ಕಾಮಗಾರಿಗಳು: ಹುಮನಾಬಾದ್‌ ತಾಲ್ಲೂಕಿನ ತಾಳಮಡಗಿ ಗ್ರಾಮದ ವಾಲ್ಮಿಕಿ ದೇಗುಲದ ಸಮುದಾಯ ಭವನದ ಕಾಮಗಾರಿ, ಹುಣಸಗೇರಾ ಗ್ರಾಮದ ಮರಿಗೆಮ್ಮ ಮಂದಿರ ಸಮೀಪದ ಸಾಂಸ್ಕೃತಿಕ ಭವನ ನಿರ್ಮಾಣ, ಅಮಿರಾಬಾದ್ ವಾಡಿ ಗ್ರಾಮದ ಬಸವೇಶ್ವರ ಸಾಂಸ್ಕೃತಿಕ ಭವನ ನಿರ್ಮಾಣ, ನಿರ್ಗುಡಿ ಗ್ರಾಮದ ಮಹಾದೇವ ಮಂದಿರ ಸಮೀಪದಲ್ಲಿ ಸಮುದಾಯ ಭವನದ ಮುಂದುವರೆದ ಕಾಮಗಾರಿ, ಬೋತಗಿ ಗ್ರಾಮದ ಅಂಬೇಡ್ಕರ್ ವೃತ್ತದ ಸಮೀಪ ಸಿಸಿ ರಸ್ತೆ ನಿರ್ಮಾಣ, ಕೌಡಿಯಾಳ (ಆರ್) ಗ್ರಾಮದ ಹನುಮಾನ ದೇಗುಲದ ಸಾಂಸ್ಕೃತಿಕ ಭವನ, ಮುಗನೂರ ಸಮುದಾಯ ಭವನದ ಉಳಿದ ಕಾಮಗಾರಿ, ಹಳ್ಳಿಖೇಡ (ಬಿ) ಗ್ರಾಮದ ಮೆಥೋಡಿಸ್ಟ್ ಚರ್ಚ್ ಸಮೀಪ ಸಮುದಾಯ ಭವನದ ಮುಂದುವರೆದ ಕಾಮಗಾರಿ, ಇಟಗಾ ಗ್ರಾಮದ ಮೇರಿ ಪವಾಡ ಮಾತೆ ಮಂದಿರ ಸಮೀಪದ ಸಮುದಾಯ ಭವನದ ಸುತ್ತುಗೋಡೆ ನಿರ್ಮಾಣ, ಹುಣಸಗೇರಾದ ಬೀರಲಿಂಗೇಶ್ವರ ದೆಗುಲದ ಸಮೀಪ ಸಾಂಸ್ಕೃತಿಕ ಭವನ, ಸದ್ಲಾಪುರ ಗ್ರಾಮದ ರಸ್ತೆ ದುರಸ್ತಿ ಕಾಮಗಾರಿ, ಕಂಟನಾಯಕ್ ತಾಂಡಾದ ಸಮುದಾಯ ಭವನ, ಸಕ್ಕರಗಂಜ ವಾಡಿಯ ಸಮುದಾಯ ಭವನ ನಿರ್ಮಾಣ ಕಾಮಗಾರಿ ಬಾಕಿ ಉಳಿದಿವೆ.

2020-21ನೇ ಸಾಲಿನಲ್ಲಿ ಕ್ಷೇತ್ರದ 14 ಗ್ರಾಮಗಳಲ್ಲಿ ಹೈಮಾಸ್ಟ್ ಅಳವಡಿಸಲಾಗಿದೆ. ಮೊಳಕೇರಾ, ಕನಕಟ್ಟಾ, ಘಾಟಬೋರಾಳ್, ಹುಣಸಗೇರಾ, ನಂದಗಾಂವ್ ಓತಗಿ, ಕುಡಂಬಲ್, ಇಟಗಾ, ಮುದ್ನಾಳ, ಸಿತಾಳಗೇರಾ, ಸಿಂದಬಂದಗಿ, ಹಳ್ಳಿಖೇಡ ಕೆ, ತಾಳಮಡಗಿ, ದುಬಲ ಗುಂಡಿ ಗ್ರಾಮ ಸೇರಿದಂತೆ 14 ಗ್ರಾಮಗಳಲ್ಲಿ ತಲಾ ₹ 2.50 ಲಕ್ಷದಲ್ಲಿ ಹೈಮಾಸ್ಟ್ ಅಳವಡಿಸಲಾಗಿದೆ.

2020-21ನೇ ಸಾಲಿನಲ್ಲಿ 9 ಸಮುದಾಯ ಭವನಗಳಿಗೆ ಅನುದಾನ ಒದಗಿಸಲಾಗಿದೆ. ಶಾಮತಾಬಾದ್, ವಡ್ಡೆನಕೇರಾ, ಸೋನಕೇರಾ, ಮದರ ಗಾಂವ್ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊಡಲಾಗಿದೆ.

ತಾಲ್ಲೂಕಿನ ಅನೇಕ ಸರ್ಕಾರಿ ಶಾಲೆಗಳ ಕೊಠಡಿಗಳು ಹಾಳಾಗಿವೆ. ಕೊಠಡಿಗಳ ನಿರ್ಮಾಣಕ್ಕೆ ಶಾಸಕರು ಹೆಚ್ಚಿನ ಅನುದಾನ ಕೊಡಬೇಕು ಎಂದು ಬಿಜೆಪಿ ಮುಖಂಡ ಸೋಮನಾಥ ಪಾಟೀಲ ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.