ಹುಮನಾಬಾದ್: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಉಪವಿಭಾಗಾಧಿಕಾರಿ ಪ್ರಕಾಶ್ ಕುದ್ರೆ ನೇತೃತ್ವದಲ್ಲಿ ನಡೆದ ದಲಿತಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಪಟ್ಟಣದ ಇಂದಿರಾನಗರ ಬಡಾವಣೆಗೆ ತೆರಳುವ ರಸ್ತೆ ಪಕ್ಕದಲ್ಲಿ ಅಳವಡಿಸಿರುವ ನಾಮಫಲಕವನ್ನು ಏ.14ರ ನಂತರ ತೆರವುಗೊಳಿಸಲಾಗುವುದು ಎಂದು ನಿರ್ಧರಿಸಲಾಯಿತು.

ದಲಿತ ಮುಖಂಡ ಲಕ್ಷ್ಮೀಪುತ್ರ ಮಾಳಗೆ ಮಾತನಾಡಿ, ‘ಇಂದಿರಾನಗರ ಬಡಾವಣೆಗೆ ತೆರಳುವ ರಸ್ತೆಯ ಪಕ್ಕದಲ್ಲಿ ಬುದ್ಧ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ನಾಮಫಲಕ ಯಾವುದೇ ಉದ್ದೇಶಪೂರ್ವಕದಿಂದ ಅಳವಡಿಸಿಲ್ಲ. ಆದರೂ ಕೆಲವರು ವೈಯಕ್ತಿಕ ಪ್ರತಿಷ್ಠೆಯಾಗಿಸಿಕೊಂಡು ನಾಮಫಲಕ ತೆರವುಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂದರು.

ಕೆಲ ದಿನದ ಹಿಂದೆ ಪುರಸಭೆ ಮುಖ್ಯಾಧಿಕಾರಿ ವನಿತಾಬಾಯಿ ಹಾಗೂ ಇಲಾಖೆಯ ಸಿಬ್ಬಂದಿ ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ತೆರವು ಮಾಡಲು ಮುಂದಾಗಿದ್ದರು, ನಂತರ ತಹಶೀಲ್ದಾರ್, ಡಿವೈಎಸ್ಪಿ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಆಗ ನಾವು ಏ.14ರ ನಂತರ ಸ್ವತಃ ತೆರವು ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದೇವೆ. ಆದರೂ ಮರುದಿನ ವೀರಭದ್ರೇಶ್ವರ ಭಕ್ತರಿಂದ ದೇವಸ್ಥಾನದ ಮುಂಭಾಗದಲ್ಲಿ ಈ ನಾಮಫಲಕ ತೆರವು ಮಾಡಬೇಕು ಎಂದು ಆಗ್ರಹಿಸಿ ಸಭೆ ಮಾಡಿರುವುದು ಖಂಡನೀಯ ಎಂದರು.

‘ಹುಮನಾಬಾದ್ ಪಟ್ಟಣದಲ್ಲಿ ಸುಮಾರು 25ಕ್ಕೂ ಹೆಚ್ಚು ಅನಧಿಕೃತ ನಾಮಫಲಕ, ವೃತ್ತಗಳು ನಿರ್ಮಾಣವಾಗಿವೆ. ಅವೆಲ್ಲವುಗಳನ್ನು ತೆರವು ಮಾಡಿ. ನಾವು ಸಹ ನಾಮಫಲಕ ತೆರವು ಮಾಡುತ್ತೇವೆ’ ಎಂದು ಆಗ್ರಹಿಸಿದರು.

ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಪ್ರಕಾಶ್ ಕುದ್ರೆ ಮಾತನಾಡಿ, ‘ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಬಂದಿದ್ದೇವೆ. ನಮ್ಮಿಂದಾಗಿ ಯಾರಿಗೂ ಸಮಸ್ಯೆ ಆಗದಂತೆ ಬದುಕಬೇಕು. ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಲ್ಯಾಣ ಕರ್ನಾಟಕದಲ್ಲೇ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಹೀಗಾಗಿ ನಾವೆಲ್ಲರೂ ಸೌಹಾರ್ದತೆಯಿಂದ, ಕಾನೂನಿಗೆ ಗೌರವ ನೀಡಬೇಕು. ಅನುಮತಿ ಇಲ್ಲದೆ ನಾಮಫಲಕ ಅಳವಡಿಸಿದ್ದನ್ನು ತೆರವು ಮಾಡಬೇಕು’ ಎಂದರು.

‘ಪಟ್ಟಣದಲ್ಲಿ ಅನಧಿಕೃತ ವೃತ್ತ, ನಾಮಫಲಕಗಳ ಮಾಹಿತಿ ಪಡೆದು ಕಾನೂನಿನ ಪ್ರಕಾರ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಹಶೀಲ್ದಾರ್ ಅಂಜುಂ ತಬಸುಮ್, ಡಿವೈಎಸ್ಪಿ ಮಡೋಳಪ್ಪ ಪಿ.ಎಸ್., ಸಿಪಿಐ ಸಂತೋಷ್ ತಟೆಪಳ್ಳಿ, ಪಿಎಸ್ಐ ಸುರೇಶ್ ಚೌಹಾಣ್, ಆರ್.ಐ. ರಾಹುಲ್ ಪ್ರಸಾದ್, ಸುಭಾಷ ಆರ್ಯ, ಬಸವರಾಜ ಆರ್ಯ, ಧರ್ಮರಾಯ್ ಘಾಂಗ್ರೆ, ಲಕ್ಷೀಪುತ್ರ ಮಾಳಗೆ, ಶಿವಪುತ್ರ ಮಾಳಗೆ, ಶ್ರೀಧರ್ ಹಿರೇಮನೆ, ವೀರಪ್ಪ ಧುಮ್ಮನಸೂರ್, ಗಣಪತಿ ಅಷ್ಟೂರೆ, ಲೋಕೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-33-431189948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.