ಹುಮನಾಬಾದ್: ‘ಬಿತ್ತನೆ ಬೀಜಕ್ಕಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸುಮಾರು 14 ಸಾವಿರ ಕ್ವಿಂಟಾಲ್ ಸೋಯಾ ಸೇರಿದಂತೆ ಉದ್ದು, ಹೆಸರು, ತೊಗರಿ, ಜೋಳ ದಾಸ್ತಾನು ಮಾಡಲಾಗಿದೆ. ಇನ್ನೂ ಬೇಕಾದರೆ ಮತ್ತಷ್ಟು ತರಿಸಲಾಗುವುದು. ರೈತರು ಆತಂಕಕ್ಕೆ ಒಳಗಾಗಬಾರದು. 6 ರೈತ ಸಂಪರ್ಕ ಕೇಂದ್ರ ಹಾಗೂ ವಿಶೇಷವಾಗಿ 8 ಕಡೆಗಳಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ’ ಎಂದರು.

ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ ಮಾತನಾಡಿ, ‘ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಮುಂಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಸ್ವಲ್ಪ ಮಳೆ ಆದರೆ ರೈತರು ಬಿತ್ತನೆ ಮಾಡಬಾರದು. ಹವಾಮಾನ ಇಲಾಖೆಯ ಪ್ರಕಾರ ಜೂನ್ ಮೊದಲನೇ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. 70–80 ಮಿ.ಮಿ. ಮಳೆ ಆದರೆ ಮಾತ್ರ ಬಿತ್ತನೆ ಪ್ರಾರಂಭ ಮಾಡಬೇಕು. ಬೀಜ ಮತ್ತು ರಸ ಗೊಬ್ಬರದ ಸಮಸ್ಯೆ ಕಂಡು ಬಂದರೆ ನನ್ನ ಗಮನಕ್ಕೆ ತನ್ನ’ ಎಂದರು.

ಕೃಷಿ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ, ರೈತ ಸಂಘದ ಅಧ್ಯಕ್ಷ ಸತೀಶ ನನ್ನೋರೆ, ಕೃಷಿ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಬಿರಾದರ, ಗುರುಲಿಂಗಪ್ಪ ಓಲ್ದೋಡಿ , ಗಿರೀಶ ಪಾಟೀಲ, ಮಲ್ಲಿಕಾರ್ಜುನ ಸಿಗಿ, ನಾಗಭೂಷಣ ಸಂಗಮ್, ಗಜೇಂದ್ರ ಕನಕಟಕರ್, ಅನೀಲ ಪಸರಗಿ, ಅರುಣ ಬಾವಗಿ, ರಾಮರಾವ್, ಗೌತಮ ಚೌಹಾಣ, ಶಿವ ಶಂಕರ್ ತರನ್ನಳ್ಳಿ, ಕಲ್ಪಪ್ಪ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-33-1621827284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.