ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸಾಕ್ಷರತಾ ಕಲಿಕಾ ಕೇಂದ್ರ ಉದ್ಘಾಟನೆ

Last Updated 5 ಅಕ್ಟೋಬರ್ 2022, 13:35 IST
ಅಕ್ಷರ ಗಾತ್ರ

ಬೀದರ್: ಅನಕ್ಷರಸ್ಥ ಜೈಲು ವಾಸಿಗಳು ಸಾಕ್ಷರತಾ ಕಲಿಕಾ ಕೇಂದ್ರದ ಪೂರ್ಣ ಲಾಭ ಪಡೆಯಬೇಕು. ಅಕ್ಷರ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಬಸವರಾಜ ಎಸ್.ಚೇಗರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಲೋಕ ಶಿಕ್ಷಣ ಸಮತಿಯ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಸಾಕ್ಷರತಾ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಸ್ವಯಂ ಸೇವಕರು ಹಾಗೂ ಕಲಿತಿರುವ ಅನೇಕ ಕಾರಾಗೃಹ ವಾಸಿಗಳು, ಅನಕ್ಷರಸ್ಥರಿಗೆ ಅಕ್ಷರ ಅಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಕೆ. ಕನಕಟ್ಟೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವರಾಜ ಪಾಟೀಲ, ಡಯಟ್ ನೋಡಲ್ ಅಧಿಕಾರಿ ಕುಶಲರಾವ್ ಯರನಳ್ಳಿ ಕಾರಾಗೃಹ ವಾಸಿಗಳಿಗೆ ಕಲಿಕಾ ಉಪಕರಣಗಳನ್ನು ವಿತರಿಸಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸಕ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ. ಕುಚಬಾಳ ಮಾತನಾಡಿದರು.

ಜಾನಪದ ಕಲಾವಿದರಾದ ದೇವದಾಸ ಚಿಮಕೋಡ ಹಾಗೂ ಬಕ್ಕಪ್ಪ ದಂಡಿನ್ ಸಾಕ್ಷರತಾ ಗೀತೆಗಳನ್ನು ಹಾಡಿದರು. ಸಂಗಯ್ಯ ಸ್ವಾಮಿ ಸ್ವಾಗತಿಸಿದರು. ವಯಸ್ಕರ ಶಿಕ್ಷಣಾಧಿಕಾರಿ ಶಿವರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟರಾವ್ ಭಾಗ್ಯನಗರ ನಿರೂಪಿಸಿದರು. ಶಿವರಾಜ ಮಲ್ಕಾಪುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT