ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ತರಕಾರಿ ಬೆಲೆಯಲ್ಲಿ ಹೆಚ್ಚಳ

ತುರಾಯಿ ಘನತೆ ಹೆಚ್ಚಿಸಿಕೊಂಡ ಬದನೆ, ಬೆಂಡೆ, ಡೊಣ ಮೆಣಸಿನಕಾಯಿ
Last Updated 15 ಜುಲೈ 2022, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಎರಡು ವಾರಗಳಿಂದ ಬಿಟ್ಟು ಬಿಡದೆ ಸುರಿದ ಮಳೆ ಗ್ರಾಹಕರು ಮನೆಗಳಿಂದ ಹೊರ ಬರದಂತೆ ಕಟ್ಟಿ ಹಾಕಿತ್ತು. ಬೆಳಗಾವಿ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿದ ಕಾರಣ ಕೆಲ ತರಕಾರಿ ನೀರಿನಲ್ಲಿ ಕೊಳೆತು ಹೋಗಿದೆ. ಹೀಗಾಗಿ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ.

ಬದನೆಕಾಯಿ, ಬೆಂಡೆಕಾಯಿ, ಡೊಣ ಮೆಣಸಿನಕಾಯಿ, ಚವಳೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಏರಿಕೆಯಾಗಿದೆ. ಮೆಣಸಿನಕಾಯಿ, ಆಲೂಗಡ್ಡೆ, ಬೆಳ್ಳುಳ್ಳಿ, ಎಲೆಕೋಸು, ಬೀಟ್‌ರೂಟ್‌ ಬೆಲೆ ₹ 1 ಸಾವಿರ ಹೆಚ್ಚಾಗಿದೆ.

ನುಗ್ಗೆಕಾಯಿ, ಬೀನ್ಸ್‌ ಬೆಲೆ ಪ್ರತಿ ಕೆ.ಜಿ.ಗೆ ₹ 120 ಮುಂದುವರಿದಿದೆ. ಗ್ರಾಹಕರ ಅಚ್ಚುಮೆಚ್ಚಿನ ಹಿರೇಕಾಯಿ, ಡೊಣ ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಮೆಂತೆಸೊಪ್ಪು, ಗಜ್ಜರಿ ₹80ಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ. ಪಾಲಕ್‌ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಇಳಿಕೆಯಾಗಿದೆ.

ಈರುಳ್ಳಿ, ಗಜ್ಜರಿ, ಬೀನ್ಸ್‌, ನುಗ್ಗೆಕಾಯಿ. ಹಿರೇಕಾಯಿ, ಟೊಮೆಟೊ, ಹೂಕೋಸು, ಸಬ್ಬಸಗಿ, ಮೆಂತೆ ಸೊಪ್ಪು, ಕರಿಬೇವು, ಕೊತಂಬರಿ, ತುಪ್ಪದ ಹಿರೇಕಾಯಿ, ಹಾಗಲಕಾಯಿ ಹಾಗೂ ಬೂದು ಕುಂಬಳಕಾಯಿ ಬೆಲೆ ಸ್ಥಿರವಾಗಿದೆ.


‘ಬೆಳಗಾವಿ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಬಂದ್‌ಗೆ ಕರೆ ನೀಡಿದ್ದ ಕಾರಣ ಹೆಚ್ಚು ರೈತರು ಮಾರುಕಟ್ಟೆಗೆ ತರಕಾರಿ ತಂದಿರಲಿಲ್ಲ. ಪೂರೈಕೆ ಕಡಿಮೆಯಾಗಿ ಬೇಡಿಕೆ ಅಧಿಕ ಇರುವ ಕಾರಣ ಸಹಜವಾಗಿಯೇ ನಗರದಲ್ಲಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ಬೀಟ್‌ರೂಟ್‌, ಗಜ್ಜರಿ, ತೊಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ತುಪ್ಪದ ಹಿರೇಕಾಯಿ ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.

ಬೆಳಗಾವಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಂದ ಹಸಿ ಮೆಣಸಿನಕಾಯಿ, ಕೊತಂಬರಿ ಬಂದಿದೆ. ಜಿಲ್ಲೆಯ ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕಿನಿಂದ ಕರಿಬೇವು, ಕೊತಂಬರಿ, ಬದನೆಕಾಯಿ, ಎಲೆಕೋಸು, ಹಿರೇಕಾಯಿ ಹಾಗೂ ಸೌತೆಕಾಯಿ ಬಂದಿದೆ.

.....................................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ
........................................................................

ಈರುಳ್ಳಿ 10-20,20-30
ಮೆಣಸಿನಕಾಯಿ 40-50,50-60
ಆಲೂಗಡ್ಡೆ 20-30,30-40
ಬೆಳ್ಳುಳ್ಳಿ 25-30,30-40
ಗಜ್ಜರಿ 60-80,60-80
ಬೀನ್ಸ್‌ 100-120,100-120
ಬದನೆಕಾಯಿ 20-30,40-50

ಬೆಂಡೆಕಾಯಿ 30-40,50-60
ಹಿರೇಕಾಯಿ 60-80,60-80
ನುಗ್ಗೆಕಾಯಿ 100-120,100-120
ಡೊಣ ಮೆಣಸಿನಕಾಯಿ 50-60,60-80
ಚವಳೆಕಾಯಿ 30-40,50-60

ಮೆಂತೆ ಸೊಪ್ಪು 80-100,60-80

ಎಲೆಕೋಸು 30-40,40-50
ಹೂಕೋಸು 60-80,70-80
ಸಬ್ಬಸಗಿ 60-80,60-80
ಬೀಟ್‌ರೂಟ್‌ 40-50,50-60
ಕರಿಬೇವು 30-40,30-40
ಕೊತಂಬರಿ 50-60,50-60
ಟೊಮೆಟೊ 20-30,20-30
ಪಾಲಕ್‌ 50-60,40-50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT