ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸಡಗರದ ಸ್ವಾತಂತ್ರ್ಯ ದಿನಾಚರಣೆ

Last Updated 15 ಆಗಸ್ಟ್ 2022, 13:39 IST
ಅಕ್ಷರ ಗಾತ್ರ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 76ನೇ ಸ್ವಾತಂತ್ರ್ಯ ದಿನವನ್ನು ನಗರದ ವಿವಿಧೆಡೆ ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಡಿಸಿಸಿ ಬ್ಯಾಂಕ್: ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು.
ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈಜೋಡಿಸಿ, ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.
ನಿರ್ದೇಶಕರಾದ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಎಂ.ಡಿ. ಸಲೀಮೊದ್ದಿನ್, ಪರಮೇಶ್ವರ ಮುಗಟೆ, ಸಂಗಮೇಶ ಪಾಟೀಲ ಅಲಿಯಂಬರ್, ಎನ್‍ಎಸ್‍ಎಸ್‍ಕೆ ಉಪಧ್ಯಕ್ಷ ಬಾಲಾಜಿ ಚವ್ಹಾಣ್, ನಿರ್ದೇಶಕರಾದ ಝರೆಪ್ಪ ಮಮದಾಪುರ, ವಿಜಯಕುಮಾರ ಪಾಟೀಲ ಸಿತಾಳಗೇರಾ, ಸಿದ್ರಾಮಪ್ಪ ವಾಘಮಾರೆ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಇದ್ದರು.


ಕಾರ್ಮಿಕರ ಮಹಾ ಸಂಘ:

ನಗರದ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಸ್ವಾತಂತ್ರ್ಯ ಹೋರಾಟ ಕುರಿತು ಮಾತನಾಡಿದರು.
60 ವರ್ಷ ಪೂರೈಸಿದ 15 ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರೇಮಕುಮಾರ ಕಾಂಬಳೆ, ಸುಭಾಷ ಕರಕನಳ್ಳಿ, ಪ್ರಭುರಾವ್ ಬಾಚೆಪಳ್ಳಿ, ಕಲ್ಲಪ್ಪ ಸಂಪಿಗೆ, ದಶರಥ ಚಾಂಬೋಳೆ ಇದ್ದರು.


ವಿದ್ಯಾ ವಿಕಾಸ ಟ್ರಸ್ಟ್:

ನೌಬಾದ್‍ನ ವಿದ್ಯಾ ವಿಕಾಸ ಟ್ರಸ್ಟ್‍ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಬಾಬುರಾವ್ ಕಾರಬಾರಿ ಧ್ವಜಾರೋಹಣ ನೆರವೇರಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಡಾ. ಪಟವರ್ಧನ್ ರಾಠೋಡ್, ಬಿಎಸ್‍ಪಿ ನಗರ ಘಟಕದ ಅಧ್ಯಕ್ಷ ದತ್ತಪ್ಪ ಮಂಗಲೆ, ಶಾಲೆ ಆಡಳಿತಾಧಿಕಾರಿ ಶರಣಪ್ಪ ಚಂದನಹಳ್ಳಿ, ಬಸವರಾಜ ಬಲ್ಲೂರ, ವಿಜಯಕುಮಾರ ಪಾಟೀಲ, ಲಕ್ಷ್ಮಣರಾವ್ ಮಂಜುಳಕರ್, ದಾಮೋಧರ್, ಬಾಬುರಾವ್ ಕಾಂಬಳೆ, ಶಿವಾನಂದ ಬಿರಾದಾರ, ಸುನಿಲ್ ಕುಲಕರ್ಣಿ, ಅಶ್ವಿನಿ ದಾಮಾ, ಸುಗಂಧಾ ಇದ್ದರು.


ಕಾರಂಜಾ ಸಮಿತಿ:

ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ, ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ಅರವಿಂದ ಕುಲಕರ್ಣಿ, ಲಕ್ಷ್ಮಿ ಕಮಲಪುರೆ, ಸೂರ್ಯಕಾಂತ, ಎಂ.ಎ. ಸಮದ್, ರಾಜಶೇಖರ, ಕಲ್ಯಾಣರಾವ್ ಇದ್ದರು.


ಗ್ಲೊಬಲ್ ಸೈನಿಕ ಅಕಾಡೆಮಿ:

ನಗರದ ಬೆನಕನಳ್ಳಿ ರಸ್ತೆಯಲ್ಲಿ ಇರುವ ಗ್ಲೊಬಲ್ ಸೈನಿಕ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಶರಣಪ್ಪ ಸಿಕೇನಪುರೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿ ಗಮನ ಸೆಳೆದರು. ಪ್ರಾಚಾರ್ಯ ಇವ್ಲಿನ್ ಜಾರ್ಜ್ ಕೆ.ಕೆ. ಅಟ್ಟಲ್, ಕಾರಂಜಿ ಸ್ವಾಮಿ, ರಾಮ ದವಲಜೆ, ಮೇಜರ್ ಮಡೆಪ್ಪ, ಅಶೋಕ ಪಾಟೀಲ, ಪ್ರಲ್ಹಾದ್ ಇದ್ದರು.


ಕಾರ್ಮಿಕರ ಸಂಘ:

ನಗರದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸ್ವಾಮಿದಾಸ್ ದೊಡ್ಡೆ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಕೂಲಿ ಕಾರ್ಮಿಕರ ಟ್ರಸ್ಟ್ ಅಧ್ಯಕ್ಷ ರವೀಂದ್ರ ಕೊಳ್ಳೂರ, ಸಂಜು ಸಿಂಧೆ, ಸುನಿಲ ಬಚ್ಚನ್, ಮೋಜಸ್ ನಾಗೂರೆ, ಫಿಲಿಪ್ ದೊಡ್ಡಮನಿ, ಸಂಜಯರಾಜ್, ಶೈಲೇಶ, ಬಿ. ಬಾಲಾಜಿ ಔರಾದಕರ್ ಇದ್ದರು.


ಎಸ್‍ಎಫ್‍ಐ:

ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ನಗರದ ಭಗತ್‍ಸಿಂಗ್ ವೃತ್ತದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಹೀಂಖಾನ್ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ, ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ರೋಶನ್ ಮಲ್ಕಾಪುರೆ, ಅನಿಕೇತ್ ಹೊಸಮನಿ, ಸುನಿಲ್ ಕಡ್ಡಿ, ರಾಜಶೇಖರ ಜವಳೆ, ನಾಗೇಶ ಕೋಟೆ ಇದ್ದರು.


ಪ್ರಿಂಟಿಂಗ್ ಪ್ರೆಸ್ ಅಸೋಸಿಯೇಷನ್:

ಬೀದರ್ ಪ್ರಿಟಿಂಗ್ ಪ್ರೆಸ್ ಅಸೋಸಿಯೇಷನ್ ವತಿಯಿಂದ ನಗರದ ದೀಪಕ್ ಚಿತ್ರ ಮಂದಿರ ಹತ್ತಿರದ ಅಸೋಸಿಯೇಷನ್ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಅಧ್ಯಕ್ಷ ರೇವಣಸಿದ್ದಯ್ಯ ಸ್ವಾಮಿ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಸುನಿಲಕುಮಾರ ಹೊನ್ನಾಳೆ, ಅಜೀತ್ ಚಿಲ್ಲರ್ಗಿ, ವೈಜಿನಾಥ ಸ್ವಾಮಿ, ರೇವಣಸಿದ್ದ, ರಜನಿಕಾಂತ, ರಾಜಕುಮಾರ ಬಿರಾದಾರ, ರಾಮಶೆಟ್ಟಿ, ಚನ್ನಪ್ಪ ಚಲುವಾ, ಸೋಮಶೇಖರ ಪಾಟೀಲ, ಸಾಕೇತ, ಅಶೋಕ, ಪಂಡಿತ, ಶಿವರಾಜ, ಕಾಶೀನಾಥ, ಸಂಜುಕುಮಾರ, ಜಗನ್ನಾಥ, ಲೋಕೇಶ, ವೆಂಕಟೇಶ, ಪುಂಡಲೀಕ್ ಇದ್ದರು.


ಹಾಲು ಒಕ್ಕೂಟ:

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ವತಿಯಿಂದ ಇಲ್ಲಿಯ ಸರಸ್ವತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಂದಿನಿ ಹಾಲಿನ ಬಾಟಲಿ ಹಾಗೂ ಚಾಕೊಲೇಟ್ ಉಚಿತವಾಗಿ ವಿತರಿಸಲಾಯಿತು. ನಂದಿನಿ ಹಾಲಿನ ಮಹತ್ವ ಮನವರಿಕೆ ಮಾಡಿಕೊಡಲಾಯಿತು.
ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ಭೀಮರಾವ್ ಬಳತೆ, ಮಾರುಕಟ್ಟೆ ಉಪ ವ್ಯವಸ್ಥಾಪಕ ಶಾಲಿವಾನ್ ವಾಡೆ, ಸಹಾಯಕ ವ್ಯವಸ್ಥಾಪಕಿ ಮೀನಾಕುಮಾರಿ, ಮೇಲ್ವಿಚಾರಕ ಸೂರ್ಯಕಾಂತ, ನಂದಕುಮಾರ, ಸಾಯಿಕುಮಾರ, ದೀಪಕ್ ಅಷ್ಟಗಿಕರ್, ಗೌರಿಕಿರಣ, ಶಾಲೆಯ ಶಿಕ್ಷಕರು ಇದ್ದರು.

* *

ನೌಬಾದ್‍ನಲ್ಲಿ ಹರ್ ಘರ್ ತಿರಂಗಾ ಯಾತ್ರೆ:

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಇಲ್ಲಿಯ ನೌಬಾದ್‍ನಲ್ಲಿ ಹರ್ ಘರ್ ತಿರಂಗಾ ಯಾತ್ರೆ ನಡೆಯಿತು.
ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು. ಯಾತ್ರೆಯ ಉದ್ದಕ್ಕೂ ಬೋಲೋ ಭಾರತ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಉಚಿತವಾಗಿ ವಿತರಿಸಲಾಯಿತು.
ಇದಕ್ಕೂ ಮುನ್ನ ಯಾತ್ರೆಗೆ ಚಾಲನೆ ನೀಡಿದ ಬೇಮಳಖೇಡ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಡಾ. ರಾಜಶೇಖರ ಶಿವಾಚಾರ್ಯರು, ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದಿಂದಾಗಿಯೇ ನಾವು ಇಂದು ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಿದೆ ಎಂದು ನುಡಿದರು.
ನಗರಸಭೆ ಸದಸ್ಯೆ ಮಹಾದೇವಿ ಬಸವರಾಜ ಹುಮನಾಬಾದೆ, ಯುವ ಮುಖಂಡ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಸಂಗಮೇಶ ಹುಮನಾಬಾದೆ, ಬಸವರಾಜ ಹುಮನಾಬಾದೆ, ಕಂಟೆಪ್ಪ ಭಂಗೂರೆ, ವೀರೇಶ ಹುಮನಾಬಾದೆ, ಜಗದೀಶ ಕುಂಬಾರ, ಬಸವರಾಜ ಭಂಗೂರೆ, ಲೋಕೇಶ ಭಂಗೂರೆ, ಸಾಗರ ಚಾವಳೆ, ಮಹೇಶ ಪಾಟೀಲ, ಅವಿನಾಶ ಮೂಲಗೆ, ವಿಶಾಲ ಅತಿವಾಳೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT