ಬೀದರ್: ವಾಯುಪಡೆಯ ಪ್ರತಿಷ್ಠಿತ ‘ಸೂರ್ಯಕಿರಣ’ ಏರೋಬ್ಯಾಟಿಕ್ ತಂಡ (ಎಸ್ಕೆಎಟಿ) ಈಗ 30ರ ಸಂಭ್ರಮದಲ್ಲಿದೆ. ಮೂರು ದಶಕಗಳಲ್ಲಿ ಈ ತಂಡದ ಕಾರ್ಯ ಹಾಗೂ ಸಾಧನೆ ಅನನ್ಯವಾಗಿದ್ದು, ವಾಯುಪಡೆಯ ‘ರಾಯಭಾರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂಬತ್ತು ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡವು ಮೈನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಹೆಸರಾಗಿದೆ. ಕಣಿವೆ, ಸಮುದ್ರ ತೀರ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ತನ್ನ ವೃತ್ತಿಪರತೆ ಪ್ರದರ್ಶಿಸಿದ ಖ್ಯಾತಿ ಇದಕ್ಕಿದೆ.

ಭಾರತದ ಪ್ರಮುಖ ನಗರಗಳು ಸೇರಿದಂತೆ ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಸಿಂಗಪುರ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವೆಡೆ ಸಾವಿರಾರು ಕಿ.ಮೀ ಕ್ರಮಿಸಿ, ಅತ್ಯುತ್ತಮ ಪ್ರದರ್ಶನ ನೀಡಿದೆ.

‘ಏರೋಬ್ಯಾಟಿಕ್ ತಂಡ 1996ರ ಮೇ 27ರಂದು ಬೀದರ್ ವಾಯುಪಡೆ ತರಬೇತಿ ಕೇಂದ್ರದಲ್ಲಿ ಸ್ಥಾಪನೆಗೊಂಡಿತ್ತು. 1996ರ ಸೆಪ್ಟೆಂಬರ್ನಲ್ಲಿ ಕಿರಣ ಎಮ್.ಕೆ.–2 ಹೆಸರಿನ ವಿಮಾನಗಳ ಮೊಟ್ಟ ಮೊದಲ ಸಾರ್ವಜನಿಕ ವೈಮಾನಿಕ ಪ್ರದರ್ಶನ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿತ್ತು. ಇದಾದ ಬಳಿಕ ಹಲವೆಡೆ ಈ ಲೋಹದ ಹಕ್ಕಿಗಳು ಕರಾಮತ್ತು ತೋರಿದ್ದವು.

2015ರಲ್ಲಿ ಕಿರಣ ಎಮ್.ಕೆ.–2 ವಿಮಾನಗಳ ಜಾಗವನ್ನು ಕೆಂಪು–ಬಣ್ಣಗಳ ‘ಹಾಕ್ ಎಮ್.ಕೆ.–132 ಜೆಟ್ ವಿಮಾನಗಳು ತುಂಬಿದವು. ತಂಡ ಈವರೆಗೆ 800ಕ್ಕೂ ಹೆಚ್ಚು ವೈಮಾನಿಕ ಪ್ರದರ್ಶನಗಳನ್ನು ನೀಡಿದೆ. ಈ ವಿಮಾನಗಳ ತರಬೇತಿ ಬೀದರ್ ಆಕಾಶದಲ್ಲಿ ನಿತ್ಯ ಸಾಮಾನ್ಯ.

ಸಂಕೀರ್ಣ ತರಬೇತಿ: ಈ ತಂಡದ ಪೈಲಟ್ಗಳಿಗೆ ಅತ್ಯಂತ ಸಂಕೀರ್ಣ ತರಬೇತಿಗೆ ಒಳಪಡಿಸಲಾಗುತ್ತದೆ. ಜಗತ್ತಿನ ಅತ್ಯುತ್ತಮ ಪೈಲಟ್ಗಳನ್ನು ಕೊಟ್ಟಿರುವ ಈ ತಂಡವು ಈಗ 30ರ ಸಂಭ್ರಮಕ್ಕೆ ಸಿದ್ಧಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.