ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಮಂತ್ರಿಗೆ ಅವಹೇಳನ: ಬೀದರ್‌ನಲ್ಲಿ ವ್ಯಕ್ತಿ ಬಂಧನ

Last Updated 26 ಜೂನ್ 2020, 17:18 IST
ಅಕ್ಷರ ಗಾತ್ರ

ಬೀದರ್: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೆಲ ಬಿಜೆಪಿ ಮುಖಂಡರ ವಿರುದ್ಧ ಟ್ವಿಟ್ಟರ್‌ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ನಗರದ ಬದ್ರುದ್ದೀನ್‌ ಕಾಲೊನಿಯ ವ್ಯಕ್ತಿಯನ್ನು ಶುಕ್ರವಾರ ಗಾಂಧಿಗಂಜ್‌ ಪೊಲೀಸರು ಬಂಧಿಸಿದ್ದಾರೆ.

ನಕಲಿ ಟ್ವಿಟ್ಟರ್‌ ಖಾತೆ ತೆರೆದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಹಾಗೂ ಎರಡು ಸಮುದಾಯಗಳ ಮಧ್ಯೆ ದ್ವೇಷ ಭಾವನೆ ಕೆರಳಿಸುವಂತಹ ಸಂದೇಶಗಳನ್ನು ಕಳಿಸುತ್ತಿದ್ದ ಆರೋಪದ ಮೇಲೆ ಬದ್ರುದ್ದೀನ್ ಕಾಲೊನಿಯ ನಿವಾಸಿ 40 ವರ್ಷದ ಮುಲ್ತಾನಿಮಿಯಾ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ.

ಫೆಬ್ರುವರಿ ಹಾಗೂ ಮಾರ್ಚ್‌ ವೇಳೆ ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಪೋಸ್ಟ್‌ ಮಾಡಿರುವುದು ವಿಚಾರಣೆಯ ಸಂದರ್ಭದಲ್ಲಿ ಗೊತ್ತಾಗಿದೆ. ಬೇರೆಯವರ ಹೆಸರಲ್ಲಿ ಖಾತೆ ತೆರೆದು ಪೋಸ್ಟ್‌ ಮಾಡುತ್ತಿದ್ದ ವ್ಯಕ್ತಿ ಇವನೇ ಎನ್ನುವುದು ಖಚಿತವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ್‌ ಡಿ.ಎಲ್‌.ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT