ಗುರುವಾರ , ಅಕ್ಟೋಬರ್ 17, 2019
27 °C

ಅಂತರ್‌ ಕಾಲೇಜುಗಳ ಯುವಜನೋತ್ಸವ ನಾಳೆಯಿಂದ

Published:
Updated:

 
ಬೀದರ್‌: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ 11ನೇ ಅಂತರ್ ಕಾಲೇಜುಗಳ ಯುವಜನೋತ್ಸವ ಅಕ್ಟೋಬರ್‌ 12, 13 ಹಾಗೂ 14 ರಂದು ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದೆ.

ಅ.12 ರಂದು ಸಾಹಿತಿ ರಂಜಾನ ದರ್ಗಾ ಉದ್ಘಾಟಿಸುವರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್, ತೋಟಗಾರಿಕೆ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಡಾ.ಎನ್.ರಾಜೇಶ್ವರಿ, ಶಂಕರೆಪ್ಪ ಮಳಲಿ, ಎಸ್.ಎನ್.ಮಂಜುನಾಥ ಗೌಡ, ಆರ್.ಎಂ.ನಾಗೇಶ, ಡಾ.ಯೋಗಿರಾಜ ಪಾಟೀಲ ಭಾಗವಹಿಸುವರು.

ಅ.14 ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ, ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಭಾಗವಹಿಸುವರು.

ಅತಿಥಿಗಳಾಗಿ ಡಾ.ಎನ್‌.ಬಸವರಾಜ, ಡಾ.ವೈ.ಕೆ.ಕೋಟಿಕಲ್‌, ಡಾ.ಎಂ.ಎಸ್‌.ಕುಲಕರ್ಣಿ, ಡಾ.ಎಸ್‌.ಐ.ಅಥಣಿ, ಡಾ.ಛಾಯಾ ಪಾಟೀಲ, ಎನ್‌.ಮುರಳಿ ಭಾಗವಹಿಸುವರು.

Post Comments (+)