ವಿಶೇಷ ರೈಲು ಗುರುತಿನ ಚೀಟಿ ಬಿಡುಗಡೆ

ಬೀದರ್: ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ಪ್ರಯುಕ್ತ ಶ್ರೀ ಸಿದ್ದರಾಮಯ್ಯ ಅಮೃತ ಮಹೋತ್ಸವ ಜಿಲ್ಲಾ ಸಮಿತಿಯಿಂದ ಬೀದರ್‍ನಿಂದ ದಾವಣಗೆರೆಗೆ ವ್ಯವಸ್ಥೆ ಮಾಡಲಾದ ವಿಶೇಷ ರೈಲಿನ ಗುರುತಿನ ಚೀಟಿಯನ್ನು ಇಲ್ಲಿಯ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಬಿಡುಗಡೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಹಾಗೂ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಅವರು ಜಂಟಿಯಾಗಿ ಗುರುತಿನ ಚೀಟಿ ಬಿಡುಗಡೆ ಮಾಡಿದರು.
ಅಮೃತ ಮಹೋತ್ಸವ ಪ್ರಯುಕ್ತ ದಾವಣಗೆರೆಗೆ ಬರಲು ಈಗಾಗಲೇ ಹೆಸರು ನೋಂದಣಿ ಮಾಡಿಸಿರುವ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮಂಗಳವಾರ (ಆ.2) ಬೆಳಿಗ್ಗೆ 10 ಗಂಟೆಯ ಒಳಗೆ ವಿಶೇಷ ರೈಲಿನ ಗುರುತಿನ ಚೀಟಿಗಳನ್ನು ಪಡೆಯಬೇಕು. ರೈಲು ಮಧ್ಯಾಹ್ನ 2ಕ್ಕೆ ಬೀದರ್ ರೈಲು ನಿಲ್ದಾಣದಿಂದ ದಾವಣಗೆರೆಗೆ ಹೊರಡಲಿದೆ ಎಂದು ತಿಳಿಸಿದರು.
ದಾವಣಗೆರೆಗೆ ಬರಲಿರುವ ಅಭಿಮಾನಿಗಳು ಮಧ್ಯಾಹ್ನ 12ಕ್ಕೆ ನಗರದ ಬೊಮ್ಮಗೊಂಡೇಶ್ವರ ವೃತ್ತದ ಬಳಿ ಬಂದು ಸೇರಬೇಕು. ಅಲ್ಲಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ರೈಲು ನಿಲ್ದಾಣಕ್ಕೆ ತೆರಳಲಾಗುವುದು ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಉಪಾಧ್ಯಕ್ಷ ಗೋವರ್ಧನ್ ರಾಠೋಡ್, ಸಂಚಾಲಕ ಬಸವರಾಜ ಮಾಳಗೆ, ಸಹ ಸಂಚಾಲಕ ಅಶೋಕ ಮಾಳಗೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಸಂತೋಷ ಜೋಳದಾಪಕೆ, ತುಕಾರಾಮ ಕರಾಟೆ, ಗಣಪತಿ ಕಮಠಾಣ, ನರಸಪ್ಪ ಜಾನಕನೋರ್, ರಾಜಕುಮಾರ ಚಿಟ್ಟಾವಾಡಿ, ರಮೇಶ ಮರ್ಜಾಪುರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.