ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಶರಣ ವೀರಭದ್ರಪ್ಪ ಜಾತ್ರೆ

Last Updated 26 ಏಪ್ರಿಲ್ 2022, 5:15 IST
ಅಕ್ಷರ ಗಾತ್ರ

ಜನವಾಡ: ಶರಣ ವೀರಭದ್ರಪ್ಪ ಅವರ 75ನೇ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.

ವೀರಭದ್ರಪ್ಪ ಅವರ ಭಾವಚಿತ್ರದ ಮೆರವಣಿಗೆ, ಗದ್ಗುಗೆಗೆ ಮಹಾ ರುದ್ರಾಭಿಷೇಕ, ಧೂನಿ ಪೂಜೆ ಜರುಗಿತು.

ವಿವಿಧೆಡೆಯಿಂದ ಬಂದಿದ್ದ ನೂರಾರು ಭಕ್ತರು ಗದ್ದುಗೆಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

ವೀರಭದ್ರಪ್ಪ ಮಂದಿರ ಪರಿಸರದಲ್ಲಿ ಮಕ್ಕಳ ಆಟಿಕೆ, ಬೆಂಡು, ಬತಾಸು, ಅಳ್ಳು, ಕಾಯಿ, ಕರ್ಪೂರ, ಅಲಂಕಾರಿಕ ವಸ್ತುಗಳು ಸೇರಿ ವಿವಿಧ ಅಂಗಡಿಗಳು ತೆರೆದುಕೊಂಡಿದ್ದವು.

ಮಧ್ಯರಾತ್ರಿ ಶ್ರದ್ಧಾ ಭಕ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಜಾತ್ರೆ ಅಂಗವಾಗಿ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೊನೆಯ ಕುಸ್ತಿ ವಿಜೇತಗೆ ಬೆಳ್ಳಿ ಕಡಗ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT