ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ವೇಮನ ತತ್ವ ಜಗತ್ತಿಗೆ ತಾರಕ :ಮಾಜಿ ಸಚಿವ ಜನಾರ್ದನ ರೆಡ್ಡಿ ಅಭಿಮತ

ಜನ್ಮದಿನಾಚರಣೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಭಿಮತ
Last Updated 21 ಜನವರಿ 2020, 9:57 IST
ಅಕ್ಷರ ಗಾತ್ರ

ಬಸವಕಲ್ಯಾಣ:`ವೇಮನರು ಮಹಾ ಯೋಗಿ ಹಾಗೂ ತತ್ವಜ್ಞಾನಿ ಆಗಿದ್ದರು. ಅವರ ತತ್ವ ಜಗತ್ತಿಗೆ ತಾರಕವಾಗಿದೆ' ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೇಳಿದರು.

ಬೆಂಗಳೂರಿನ ವೇಮ, ಹೇಮ ರೆಡ್ಡಿ ಜನಸಂಘ, ಬೀದರ್ ಜಿಲ್ಲಾ ರೆಡ್ಡಿ ಸಮಾಜ ಸಂಘ ಮತ್ತು ಭಾರತ ಮಾತಾ ಸೇವಾ ಸಮಿತಿ ಆಶ್ರಯದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ ವೇಮನ ಅವರ 608 ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

'ನಾನು ಜೈಲಿನಲ್ಲಿದ್ದಾಗ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಚಿತ್ರಕ್ಕೆ ಪ್ರತಿದಿನವೂ ಪೂಜೆ ಸಲ್ಲಿಸುತ್ತಿದ್ದೆ. ವೇಮನರ ವಚನಗಳನ್ನು ಓದುತ್ತಿದ್ದೆ. ಅದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತಿತ್ತು. ಮಲ್ಲಮ್ಮನವರು ಮಹಾಶಿವಭಕ್ತೆಯಾಗಿ ತನ್ನ ಒಳಿತಿಗಾಗಿ ಅಷ್ಟೇ ಅಲ್ಲ; ಸಮಾಜ ಬಾಂಧವರು ಕೂಡ ಸದಾ ಸುಖವಾಗಿರಲಿ, ಮನೆಗಳಲ್ಲಿ ಸಂಪತ್ತು ನಲೆದಾಡಲಿ ಎಂದು ಬೇಡಿಕೊಂಡಿದ್ದರು. ಬಸವಣ್ಣನವರ ಸಮಾನತೆಯ ತತ್ವ ಹಾಗೂ ವೇಮನರ ಸಂದೇಶ ಒಂದೇ ಆಗಿದೆ. ಶೀಘ್ರದಲ್ಲಿ ಈ ನೆಲದಿಂದಲೇ ಮಹತ್ವದ ಕಾರ್ಯ ಆರಂಭಿಸಲಿದ್ದೇನೆ' ಎಂದರು.

ಹೆಡಗಿಮುದ್ರಾ ಶಾಂತಮಲ್ಲಿಕಾ ರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮ ಅವರ ಕಾರ್ಯ ಮಾದರಿ ಆಗಿದ್ದರೂ ಅದನ್ನು ಜಗತ್ತಿಗೆ ತೋರಿಸಲು ವಿಫಲ ಆಗಿದ್ದೇವೆ. ಪದಾರ್ಥ ಯಾವುದಿದ್ದರೂ ಅದನ್ನು ಸಂಸ್ಕರಿಸಿ ಆಕರ್ಷಕವಾದ ಪೊಟ್ಟಣದಲ್ಲಿ ನೀಡಿದರೆ ಮಾತ್ರ ಜನರು ಇಷ್ಟಪಟ್ಟು ಖರೀದಿಸುತ್ತಾರೆ. ಅದರಂತೆ ಇವರ ತತ್ವದ ಪ್ರಸಾರ ಹೊಸ ರೀತಿಯಲ್ಲಿ ಕೈಗೊಳ್ಳುವುದು ಅವಶ್ಯಕ' ಎಂದರು.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, `ವೇಮನರು ಸರ್ವಜ್ಞ, ಬಸವಣ್ಣನವರಂತೆ ಶ್ರೇಷ್ಠ ಸಮಾಜ ಸುಧಾರಕರು, ಮಹಾನ್‌ ಯೋಗಿ ಆಗಿದ್ದರು' ಎಂದರು.

ವೇಮ, ಹೇಮ ರೆಡ್ಡಿಜನಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ ಮಾತನಾಡಿದರು.

ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ನವಲಿಂಗಕುಮಾರ ಪಾಟೀಲ, ಸಾಹಿತಿ ಎಚ್.ಕಾಶಿನಾಥರೆಡ್ಡಿ, ಅಮೃತರೆಡ್ಡಿ, ಜಯಶ್ರೀರೆಡ್ಡಿ, ವಿಜಯರೆಡ್ಡಿ, ಶ್ರೀಕಾಂತರೆಡ್ಡಿ, ನಾಗರಾಜ ಜ್ಯೋಗಿ ಮಾತನಾಡಿದರು.

ರೇಕುಳಗಿ ಎನ್.ಬಿ ರೆಡ್ಡಿ ಗುರೂಜಿ, ನಿರ್ಗುಡಿ ಮಲ್ಲಯ್ಯ ಮುತ್ಯಾ, ರೆಡ್ಡಿಜನಸಂಘ ರಾಜ್ಯ ಘಟಕದ ಅಧ್ಯಕ್ಷ ಲಲ್ಲೇಶರೆಡ್ಡಿ, ಮುಖಂಡರಾದ ಅರ್ಜುನ ಕನಕ, ಮಾಣಿಕರೆಡ್ಡಿ, ವಿನಾಯಕರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಜಿಲ್ಲಾ ಪಂಚಾಯಿತಿ ಸದಸ್ಯೆ ನಿರ್ಮಲಾ ಮಾನಿಗೋಪಾಳೆ, ನಗರಸಭೆ ಸದಸ್ಯ ದೀಪಕ ಗುಡ್ಡಾ, ನಾರಾಯಣರೆಡ್ಡಿ ಪಾಟೀಲ, ಶ್ರೀನಿವಾಸರೆಡ್ಡಿ
ಕಮಲಾಪುರೆ, ಸಂಜೀವರೆಡ್ಡಿ ಯರಬಾಗ, ಬಾಲರೆಡ್ಡಿ ರಾಜೋಳಾ, ರಾಜರೆಡ್ಡಿ ಮಂಠಾಳ, ಮಂಜುನಾಥರೆಡ್ಡಿ, ವಿಜಯರೆಡ್ಡಿ, ವಿಷ್ಣುರೆಡ್ಡಿ, ಶಾಂತಪ್ಪರೆಡ್ಡಿ, ಶಿವಾರೆಡ್ಡಿ, ಕೃಷ್ಣಾರೆಡ್ಡಿ ಪಾಲ್ಗೊಂಡಿದ್ದರು.

ಮೆರವಣಿಗೆ: ಕಾರ್ಯಕ್ರಮದ ಮೊದಲು ಬಸವೇಶ್ವರ ವೃತ್ತದಿಂದ ಬಸವ ಮಹಾಮನೆಯವರೆಗೆ ವೇಮನರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮಾಜಿ ಸಚಿವ ಜನಾರ್ದನರೆಡ್ಡಿ ಮೆರವಣಿಗೆಯುದಕ್ಕೂ ರಥದಲ್ಲಿ ನಿಂತುಕೊಂಡು ಕೈ ಬೀಸಿದರು. ವಿವಿಧ ವಾದ್ಯ ಮೇಳದವರು, ಭಜನಾ ತಂಡ, ಕೋಲಾಟದ ತಂಡದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT