ಚಿಟಗುಪ್ಪ: ವಿದ್ಯುತ್ ತಗುಲಿ ಜೆಸ್ಕಾಂ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತರನ್ನು ತಾಲ್ಲೂಕಿನ ಕುಡಂಬಲ್ ಗ್ರಾಮದ ಬಾಬುರಾವ್ ಶಿವರಾಜ (23) ಎಂದು ಗುರುತಿಸಲಾಗಿದೆ.
ಕುಡಂಬಲ್, ರಾಮಪುರ್, ಮದ್ನಾಳ ಗ್ರಾಮಗಳಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಅವರು, ಮುಸ್ತರಿ ಗ್ರಾಮದ ಸೀನು ರಡ್ಡಿ ನಾಗನಕೇರಾ ಎಂಬುವರ ಹೊಲದ ಹತ್ತಿರ ತುಂಡಾಗಿ ಬಿದ್ದಿದ್ದ ಲೈನ್ ಸರಿ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.