ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್| ಯೇಸುಕ್ರಿಸ್ತನ ನಾಟಕ ಪ್ರದರ್ಶನ

ಕ್ರೈಸ್ತರಿಂದ ಸಾಮೂಹಿಕ ಪ್ರಾರ್ಥನೆ, ಕ್ಯಾರಲ್ ಗೀತೆ ಗಾಯನ
Last Updated 25 ಡಿಸೆಂಬರ್ 2019, 12:47 IST
ಅಕ್ಷರ ಗಾತ್ರ

ಬೀದರ್: ಕ್ರಿಸ್‌ಮಸ್‌ ಪ್ರಯುಕ್ತ ಕ್ರೈಸ್ತರು ಇಲ್ಲಿಯ ಚರ್ಚ್‌ಗಳಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಂಗಲಪೇಟ್‌ನಲ್ಲಿರುವ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್, ಚಿಯಾನ್ ಕಾಲೊನಿಯ ಚರ್ಚ್, ನಾವದಗೇರಿಯ ಚರ್ಚ್, ಶಿವನಗರ ಚರ್ಚ್, ಹೈದರಾಬಾದ್ ರಸ್ತೆಯ ರೋಮನ್ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತರು ಶ್ರದ್ಧಾ, ಭಕ್ತಿಯಿಂದ ಪಾಲ್ಗೊಂಡರು.

ಮಕ್ಕಳಿಂದ ಯೇಸು ಕ್ರಿಸ್ತರ ನಾಟಕ ಪ್ರದರ್ಶನ, ಹಾಡುಗಳ ಸ್ಪರ್ಧೆ, ಭಜನಾ ಸ್ಪರ್ಧೆಗಳು ಜರುಗಿದವು. ನಗರದ ವಿವಿಧ ಕಾಲೊನಿಗಳ ಮನೆಗಳಲ್ಲಿ ಹುಲ್ಲಿನಿಂದ ಗೋದಲಿ ಸೃಷ್ಟಿಸಿ, ಯೇಸು ಕ್ರಿಸ್ತ್, ಮೇರಿ, ಜೋಸೆಫ್ ಭಾವಚಿತ್ರ, ಕುರಿಗಳ ಪ್ರತಿಕೃತಿಗಳನ್ನು ಇಟ್ಟು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಕೆಲ ಚರ್ಚ್‌ಗಳಲ್ಲಿ ರಾತ್ರಿ 12 ಗಂಟೆಯ ನಂತರ ಕೇಕ್ ಕತ್ತರಿಸಿ ಯೇಸು ಕ್ರಿಸ್ತರ ಜನ್ಮದಿನ ಆಚರಿಸಲಾಯಿತು.

ಹೈದರಾಬಾದ್ ರಸ್ತೆಯಲ್ಲಿರುವ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಮಕ್ಕಿಂದ ಕ್ಯಾರಲ್ ಗೀತೆ ಗಾಯನ ಹಾಗೂ ಹಿರಿಯರ ಭಜನೆ ತಂಡಗಳ ಭಜನಾ ಸ್ಪರ್ಧೆಗಳು ನಡೆದವು.

ನಾವದಗೇರಿಯ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ಯೇಸು ಕ್ರಿಸ್ತರ ಜೀವನಾಧಾರಿತ ನಾಟಕ ಪ್ರದರ್ಶಿಸಿದರು.

ಮಂಗಲಪೇಟ್‌ನಲ್ಲಿರುವ ಸೇಂಟ್ ಪೌಲ್ ಮೆಥೋಡಿಸ್ಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕೇಕ್ ಕತ್ತರಿಸ ಲಾಯಿತು. ಶಹಾಗಂಜ್‌ನ ಕ್ರೈಸ್ತ್ ಸಮುದಾಯದವರು ಈ ವರ್ಷವೂ ಸಾಮೂಹಿಕ ಭೋಜನ ಆಯೋಜಿ ಸಿದ್ದರು. ಕ್ರಿಸ್‌ಮಸ್‌ ಪ್ರಯುಕ್ತ ನಗರದ ಎಲ್ಲ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿವೆ. ಕ್ರಿಸ್‌ಮಸ್‌ ಅಂಗವಾಗಿ ಕ್ರೈಸ್ತರು ಮಂಗಳವಾರ ಹೊಸ ಬಟ್ಟೆಗಳನ್ನು ಖರೀದಿಸಿದರು. ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಗರದ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿರುವುದು ಕಂಡು ಬಂದಿತು.

ಬುಧವಾರ ಎಲ್ಲ ಚರ್ಚ್‌ಗಳಲ್ಲಿ ಪ್ರಾರ್ಥನೆಯ ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT