ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳನ ಬಂಧನ: 84 ತೊಲ ಚಿನ್ನಾಭರಣ ವಶ

Last Updated 1 ಏಪ್ರಿಲ್ 2022, 14:54 IST
ಅಕ್ಷರ ಗಾತ್ರ

ಬೀದರ್: ಗಾಂಧಿ ಗಂಜ್‌ ಪೊಲೀಸರು ಮೈಲೂರಿನ ಶಫಿಯೊದ್ದಿನ್ ಮಹಮ್ಮದ್ ಶಾದುಲ್ಲಾ ಮಿರಾನಸಾಬನನ್ನು ಬಂಧಿಸಿ 15 ಮನೆಗಳಲ್ಲಿ ಕಳ್ಳತನ ಮಾಡಿದ್ದ ಒಟ್ಟು ₹ 42 ಲಕ್ಷ ಮೌಲ್ಯದ 840 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ಮನೆಗಳಿಗೆ ಕೀಲಿ ಇರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ ಮನೆಗಳ ಕೀಲಿ ಒಡೆದು ಕಳ್ಳತನ ಮಾಡುತ್ತಿದ್ದ. ಗಾಂಧಿಗಂಜ್, ಮಾರ್ಕೆಟ್‌ ಹಾಗೂ ನ್ಯೂಟೌನ್ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಗಳ ಬೀಗ ಒಡೆದು ಕಳ್ಳತನ ಮಾಡಿರುವುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ತಿಳಿಸಿದ್ದಾರೆ.

ಡಿವೈಎಸ್‌ಪಿ ಕೆ.ಎಂ.ಸತೀಶ, ಬಲ್ಲಪ್ಪ ನಂದಗಾವಿ, ಗಾಂಧಿಗಂಜ್‌ ಠಾಣೆಯ ಪೊಲೀಸ್‌ ಇನ್‌ಸ್ಟೆಕ್ಟರ್ ಜಿ.ಎಸ್‌.ಬಿರಾದಾರ, ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್‌ಐ ಸೈಯದ್‌ ಪಟೇಲ್, ಅಶೋಕ ಕೋಟೆ, ಸಿಬ್ಬಂದಿ ನವಿನ್, ಅಶೋಕ, ನೀಲಕಂಠ ರಾಜಕುಮಾರ ಚಿಕಬಸೆ ಆರೋಪಿಯನ್ನು ಬಂಧಿಸಿದ್ದಾರೆ.

ದ್ವಿಚಕ್ರವಾಹನ ವಶ:ಮಾರ್ಕೆಟ್‌ ಠಾಣೆಯ ಪೊಲೀಸರು ಶಹಾಗಂಜ್‌ನ ಇಸಾಕ್‌ ಸಿಮನ್‌, ಭದ್ರೋದ್ದಿನ್‌ ಕಾಲೊನಿಯ ಸಲ್ಮಾನ್‌ ಶಬ್ಬೀರ್‌ಮಿಯಾ, ಸೈಫ್‌ಖಾನ್‌ ಯುಸೂಫ್‌ಖಾನ್ ಅವರನ್ನು ಬಂಧಿಸಿ ₹ 3.21 ಲಕ್ಷ ಮೌಲ್ಯದ 7 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

ಆರೋಪಿ ನೌಬಾದ್‌, ಬಸವೇಶ್ವರ ವೃತ್ತದ ಸಮೀಪ ಅಮರ್‌ಬಾರ್‌, ಡಿಸಿಸಿ ಬ್ಯಾಂಕ್ ಸೇರಿ ವಿವಿಧೆಡೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡಿದ್ದ.

ಮಾರ್ಕೆಟ್‌ ಪಿಎಸ್‌ಐ ಶಿವಪ್ಪ ಮೇಟಿ, ಪಿಎಸ್‌ಐ ಉಷಾಬಾಯಿ, ಮಹಮ್ಮದ್‌ ಆರೀಫ್, ಮಹಮ್ಮದ್‌ ಇರ್ಫಾನ್, ಪ್ರೇಮ ದಾಳಿ ಆರೋಪಿಸಿ ಆರೋಪಿಯನ್ನು ವಶ ಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT