ಶನಿವಾರ, ಜನವರಿ 29, 2022
23 °C

ಬೀದರ್: ಶ್ರಮಜೀವಿಗಳಿಗೆ ಬಡತನ ಬಾರದು- ಡಾ. ರಾಜಶೇಖರ ಶಿವಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶ್ರಮಜೀವಿಗಳಿಗೆ ಬಡತನ, ದಾರಿದ್ರ್ಯ ಬರುವುದಿಲ್ಲ ಎಂದು ಡಾ. ರಾಜಶೇಖರ ಶಿವಾಚಾರ್ಯ ನುಡಿದರು.

ಇಲ್ಲಿಯ ನೌಬಾದ್ ಸಮೀಪದ ಜ್ಞಾನ ಶಿವಯೋಗಾಶ್ರಮದಲ್ಲಿ ನಡೆದ ಮಾಸಿಕ ಶಿವ ದಿವ್ಯದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪರಮಾತ್ಮನ ಒಲುಮೆಗೆ ಅಧಿಕಾರ, ಅಂತಸ್ತು, ಶ್ರೀಮಂತಿಕೆ ಬೇಕಿಲ್ಲ. ಪ್ರೇಮ, ಭಕ್ತಿ, ದಾನ, ಧರ್ಮ, ಪರೋಪಕಾರ ಕಾರ್ಯಗಳನ್ನು ಮಾಡಿದರೆ ಸಾಕು ದೇವರ ಕೃಪೆಗೆ ಪಾತ್ರರಾಗಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಮಠ ಮಾನ್ಯಗಳು ಮುಂದೆ ಬರಬೇಕು ಎಂದು ಹೇಳಿದರು. ಅಮೆರಿಕದಲ್ಲಿ ನೆಲೆಸಿರುವ ಬೀದರ್‌ನ ಶಿವಕುಮಾರ ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.

ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಡಾ. ಸಿದ್ಧರಾಮಯ್ಯ ಸ್ವಾಮಿ ಗೋರಟಾ, ಎನ್‍ಎಸ್‍ಎಸ್‍ಕೆ ಸಿಡಿಒ ಹಾವಗಿರಾವ್, ಕಾಶೀನಾಥಪ್ಪ ಶಂಭು, ಸರಸ್ವತಿ ಗೌರಶೆಟ್ಟಿ, ಮಾದಪ್ಪ ಭಂಗೂರೆ, ಕುಶಾಲರಾವ್ ಗೌರಶೆಟ್ಟಿ, ಸಂಗಮೇಶ್ವರ ಸಿದ್ಧೇಶ್ವರೆ, ರಮೇಶ ಮಾಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ ಚೌಳಿ, ಮಹಾಂತೇಶ ಬಿರಾದಾರ ಇದ್ದರು. ಇದಕ್ಕೂ ಮುನ್ನ ಶ್ರೀ ಮಾತೇಶ್ವರಿ ಗೋಶಾಲೆಯ ಗೋವುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಗೋಶಾಲೆ ಅಧ್ಯಕ್ಷ ಸಂಗಮೇಶ ಬಿರಾದಾರ ಸ್ವಾಗತಿಸಿದರು. ಸುಭಾಷ ಬಿರಾದಾರ ನಿರೂಪಿಸಿದರು. ಕಂಟೆಪ್ಪ ಭೂರೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು