ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

48 ಕುಶಲಕರ್ಮಿಗಳಿಗೆ ಉದ್ಯೋಗ

Last Updated 20 ಜನವರಿ 2021, 14:07 IST
ಅಕ್ಷರ ಗಾತ್ರ

ಬೀದರ್: ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಕ್ವೆಸ್ಟ್ ಆನ್‍ಲೈನ್ ಸಹಯೋಗದಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ನಡೆದ ಉದ್ಯೋಗ ಮೇಳದಲ್ಲಿ 48 ಕುಶಲ ಕರ್ಮಿಗಳಿಗೆ ಉದ್ಯೋಗ ಲಭಿಸಿದೆ.

ಜಿಲ್ಲೆ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಐಟಿಐ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಹೈದರಾಬಾದ್‍ನ ಜಾನ್ಸನ್ ಲಿಫ್ಟನ್, ಪಿಎಂಎಫ್ ಎಂಜಿನಿಯರಿಂಗ್, ಕಲಬುರ್ಗಿಯ ಭಾರತ ಫೈನಾನ್ಶಿಯಲ್, ಬೆಂಗಳೂರಿನ ಅಟೋ ಲೈವ್ ಹಾಗೂ ಓರಿಯೆಂಡಲ್ ಬೆಲ್ ಕಂಪನಿಯ ಅಧಿಕಾರಿಗಳು ವಿದ್ಯಾರ್ಹತೆ, ಕೌಶಲ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.

ಜಾನ್ಸನ್ ಲಿಫ್ಟನ್ ವ್ಯವಸ್ಥಾಪಕ ಕಬಿಲ್ ದೇವ, ಪಿಎಂಎಫ್ ಎಂಜಿನಿಯರಿಂಗ್ ಕಂಪನಿಯ ವ್ಯವಸ್ಥಾಪಕ ಎಂ. ಮಧು, ಅಟೋ ಲೈವ್ ಹಾಗೂ ಓರಿಯೆಂಡಲ್ ಬೆಲ್ ಕಾರ್ಖಾನೆಯ ಮುರಳಿನಾಥ, ಗಂಗರಾಜ, ಭಾರತ ಫೈನಾನ್ಶಿಯಲ್ ವ್ಯವಸ್ಥಾಪಕ ಗಣಪತಿ,

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಕೈಲಾಶ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿದರು.

ಜೆ. ಬಸವರಾಜ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ಯುಸೂಫ್ ಜೋಜನಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT