ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಚಂಟ್ ನೆವಿ ಸೇರಲು ಅಣಿಯಾಗಿ

Last Updated 9 ಅಕ್ಟೋಬರ್ 2021, 16:29 IST
ಅಕ್ಷರ ಗಾತ್ರ

ಬೀದರ್: ಐಟಿಐ ಕುಶಲಕರ್ಮಿಗಳು ತಮ್ಮ ಜೀವನದ ಕನಸುಗಳನ್ನು ನನಸಾಗಿಸಿಕೊಳ್ಳಲು ಮರ್ಚಂಟ್ ನೆವಿಗೆ ಸೇರಲು ಅಣಿಯಾಗಬೇಕು ಎಂದು ಮರ್ಚಂಟ್ ಆ್ಯಂಡ್ ನೆವಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಮಹೇಶ ಹೇಳಿದರು.

ಇಲ್ಲಿಯ ಸರ್ಕಾರಿ ಐಟಿಐನಲ್ಲಿ ಹುಬ್ಬಳ್ಳಿಯ ಸಿಮನ್ ಸ್ಟಫಿಂಗ್ ಸಲ್ಯೂಷನ್ಸ್ ಸಹಯೋಗದಲ್ಲಿ ಐಟಿಐ ಕುಶಲಕರ್ಮಿಗಳಿಗೆ ಏರ್ಪಡಿಸಿದ್ದ ಮರ್ಚಂಟ್ ನೆವಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಐಟಿಐ ತೇರ್ಗಡೆಯಾದ 18 ರಿಂದ 25 ವರ್ಷದ ಒಳಗಿನ ಅಭ್ಯರ್ಥಿಗಳು 6 ತಿಂಗಳ ತರಬೇತಿ ಪೂರೈಸಿದರೆ ಕಿರಿಯ ತಂತಜ್ಞಾನ ಶಿಲ್ಪಿ ಆಗಬಹುದು. ಆಯ್ದ ಮರ್ಯೆನ್ ಕಂಪನಿ, ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು ಎಂದು ತಿಳಿಸಿದರು.

ಹುಬ್ಬಳ್ಳಿಯ ಸಿಮನ್ ಸ್ಟಫಿಂಗ್ ಸಲ್ಯೂಷನ್ಸ್ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನಲ್ಲಿ ತರಬೇತಿ ಲಭ್ಯ ಇದೆ. ನೌಕಾ ಸೇವೆ ಒಳ್ಳೆಯ ಕೆಲಸವಾಗಿದೆ. ನೌಕರಿಗೆ ಸೇರಿದವರಿಗೆ ಮೊದಲ ಸಂಬಳವೇ ಮಾಸಿಕ ರೂ. 74 ಸಾವಿರ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿ, ಎಲೆಕ್ಟ್ರಿಷಿಯನ್, ಇ.ಎಂ. ವೃತ್ತಿಯಲ್ಲಿ ತರಬೇತಿ ಪಡೆದವರಿಗೆ ಮರ್ಚಂಟ್ ನೆವಿ ಸುವರ್ಣ ಅವಕಾಶವಾಗಿದೆ. ಕುಶಲಕರ್ಮಿಗಳು ಕಷ್ಟಪಟ್ಟರೆ ಜೀವನಕ್ಕೆ ಹೊಸ ಮೆರುಗು ಸಿಗಲಿದೆ ಎಂದು ನುಡಿದರು.

ಮರ್ಚಂಟ್ ನೆವಿಯ ಪರಶುರಾಮ ಪವಾರ್, ಭಾವನಾ, ನೇತ್ರಾ ಮಾತನಾಡಿದರು. ತರಬೇತಿ ಅಧಿಕಾರಿ ಯುಸೂಫ್‍ಮಿಯಾ ಜೋಜನಾ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ತುಕಾರಾಮ ನಿರ್ಣಾಕರ್ ವಂದಿಸಿದರು. 412 ಐಟಿಐ ತರಬೇತಿದಾರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT