ಹುಲಸೂರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಲಸೂರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಜಕುಮಾರ ಹೊನ್ನಡೆ ಮತ್ತು ಇತರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಅವರ ಮಾರ್ಗದರ್ಶನ ಮೇರೆಗೆ ದತ್ತಾತ್ರಿ ಸ್ವಾಮಿ (ಉಪಾಧ್ಯಕ್ಷ), ಮುಕುಂದ್ ನಿಂಬಾಳ್ಕರ್(ಪ್ರಧಾನ ಕಾರ್ಯದರ್ಶಿ) ದತ್ತಾ ಸಾಬನೆ(ಕಾರ್ಯದರ್ಶಿ) ಶಿವರಾಜ ಖಪಲೆ(ಜಿಲ್ಲಾ ಪ್ರತಿನಿಧಿ) ಮಹೇಶ ಹುಲಸೂರಕರ(ಖಜಾಂಚಿ) ಆಯ್ಕೆಯಾದರು.
ತಾಲ್ಲೂಕು ಸಮಿತಿ ಸದಸ್ಯರಾಗಿ ವಿರಶೆಟ್ಟಿ ಕರಕಲ್ಲೇ, ಗುರುಪ್ರಸಾದ ಮೆಂಟೇ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.