ಬುಧವಾರ, ಸೆಪ್ಟೆಂಬರ್ 22, 2021
24 °C

ಕಬಡ್ಡಿ: ಚನ್ನಬಸವೇಶ್ವರ ತಂಡಕ್ಕೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಜನವಾಡ: ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಮೈನಾರಿಟಿ ಸ್ಪೋಟ್ರ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ತುಮಕೂರು ಜಿಲ್ಲೆಯ ಚನ್ನಬಸವೇಶ್ವರ ತಂಡ ಪ್ರಥಮ ಹಾಗೂ ಬೀದರ್‍ನ ಓಂ ಶ್ರೀರಕ್ಷಕ ತಂಡ ದ್ವಿತೀಯ ಬಹುಮಾನ ಪಡೆದವು.

ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಗಳಿಗೆ ಕ್ರಮವಾಗಿ ₹ 10 ಸಾವಿರ ಹಾಗೂ ₹ 5 ಸಾವಿರ ನಗದು ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು.

ತುಮಕೂರಿನ ನರೇಂದ್ರಕುಮಾರ ಉತ್ತಮ ರೈಡರ್ ಹಾಗೂ ಬೀದರ್‍ನ ಸಚಿನ್ ಉತ್ತಮ ಕ್ಯಾಚರ್ ಪ್ರಶಸ್ತಿಗೆ ಪಾತ್ರರಾದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಬಸವರಾಜ ಸಾಗರ್, ಶ್ರೀದೇವಿ ಶಿವರಾಜ ಪಾಟೀಲ, ಮುಖಂಡ ಸಿರಾಜುದ್ದಿನ್, ಮೈನಾರಿಟಿ ಸ್ಪೋಟ್ರ್ಸ್ ಸಂಸ್ಥೆ ಅಧ್ಯಕ್ಷ ಮುಬಾರಕ್, ಶ್ರೀನಿವಾಸ ಮೇತ್ರೆ, ಗಂಗು ಗೌರಶೆಟ್ಟಿ, ಸುದರ್ಶನ್ ಅಲಿ, ಕೇದಾರ್ ಪಾಟೀಲ ಉಸ್ಮಾನ್ ಇದ್ದರು.

ಪಂದ್ಯಾವಳಿಯಲ್ಲಿ ಬೀದರ್, ಕಲಬುರ್ಗಿ, ತುಮಕೂರು, ರಾಯಚೂರು, ಕೋಲಾರ ಜಿಲ್ಲೆಯ ತಂಡಗಳು ಪಾಲ್ಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು