ಕಾಳಗಿ: ‘ತಾಲ್ಲೂಕಿನ ಪಸ್ತಪುರ ತಾಂಡಾ ಗೇಟ್ ಕ್ರಾಸ್ನಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು’ ಎಂದು ಗ್ರಾಮದ ಮುಖಂಡ ಬಲವೀರ ರಾಠೋಡ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಚಾರ ತಿಳಿಸಿರುವ ಅವರು, ‘ಸುಲೇಪೇಟ – ರಾಣಾಪುರ ರಾಜ್ಯ ಹೆದ್ದಾರಿ ಮಾರ್ಗಮಧ್ಯೆ ಬರುವ ಪಸ್ತಪುರ ಗ್ರಾಮ ಮತ್ತು ತಾಂಡಾದಿಂದ ತಾಂಡಾ ಗೇಟ್ ಕ್ರಾಸ್ 1.5 ಕಿ.ಮೀ ಅಂತರವಿದೆ. ಹಾಗಾಗಿ ಇಲ್ಲಿ ನೀರಿನ ಸೌಲಭ್ಯ ಕಲ್ಪಿಸಿದರೆ ಸುತ್ತಮುತ್ತಲಿನ ಹೊಲಗಳಿಗೆ ತೆರಳುವ ಕೃಷಿ ಕಾರ್ಮಿಕರಿಗೆ, ತಾಂಡಾದ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.

‘ಇಲ್ಲಿ ಹೋಟೆಲ್, ಚಹಾದಂಗಡಿ ಯಾವ್ಯಾವು ಇಲ್ಲ ಹೀಗಾಗಿ ಇಲ್ಲಿ ಕೊಳವೆ ಬಾವಿ ಕೊರೆಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ತಾಂಡಾದಲ್ಲಿ ಕುಡಿಯುವ ನೀರಿಗೆ ಅಭಾವವಿಲ್ಲ. ಆದರೆ, ತಾಂಡಾ ಗೇಟ್ ಕ್ರಾಸ್ನಲ್ಲಿ ಯಾವುದೇ ಜಲಮೂಲವಿಲ್ಲ. ಹಾಗಾಗಿ ಇಲ್ಲಿ ಕೊಳವೆ ಬಾವಿ ಕೊರೆಯಿಸಿ ಸಿಂಗಲ್ ಫೇಸ್ ಮೋಟಾರ್ ಅಳವಡಿಸಿದರೆ ಜನರ ದಾಹ ನೀಗಿಸಬಹುದಾಗಿದೆ’ ಎಂದು ವಿಚಾರ ಮನವರಿಕೆ ಮಾಡಿದ್ದಾರೆ.

‘ತಾಂಡಾ ಗೇಟ್ ಕ್ರಾಸ್ನಿಂದ ಮುಂದಕ್ಕೆ ಹೋಗುವ ಕೃಷಿಕರಿಗೆ, ಕೃಷಿ ಕಾರ್ಮಿಕರಿಗೆ, ವಾಹನ ಸವಾರರಿಗೆ, ಮೋಘಾ, ರುಮ್ಮನಗೂಡ, ಸಾಸರಗಾಂವ್, ರಾಣಾಪುರ ಮತ್ತು ಹೂವಿನಭಾವಿ, ಯಲಕಪಳ್ಳಿ, ಸುಲೇಪೇಟ ಕಡೆಗೆ ತೆರಳುವ ತಾಂಡಾದ ಪ್ರಯಾಣಿಕರಿಗೆ ಅನೂಕೂಲ ಕಲ್ಪಿಸಲು ಕೊಳವೆ ಕೊರೆಯಿಸುವುದು ಅತಿ ಅಗತ್ಯವಾಗಿದೆ. ಕೆಡಿಪಿ ಸಭೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ ಅವರ ಗಮನಕ್ಕೆ ತರಲಾಗಿದೆ. ಅವರು ಸಂಬಂಧಿಸಿದ ಅಧಿಕಾರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-31-1720846491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.