ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ ವೀರರ ಶ್ರಮ ಅವಿಸ್ಮರಣೀಯ

ಕಲ್ಯಾಣ ಕರ್ನಾಟಕ ಉತ್ಸವ: ಶಾಸಕ ರಾಜಶೇಖರ ಪಾಟೀಲ ಅಭಿಮತ
Last Updated 17 ಸೆಪ್ಟೆಂಬರ್ 2022, 12:28 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಹೈದರಾಬಾದ್‌ ಕರ್ನಾಟಕ ವಿಮೋಚನೆಗೆ ನಡೆದ ಹೋರಾಟದಲ್ಲಿ ಚಿಟಗುಪ್ಪ ಸ್ವಾತಂತ್ರ್ಯ ಹೋರಾಟಗಾರರ ಶ್ರಮ ಅತ್ಯಂತ ಮಹತ್ವದ್ದು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿಯ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ,‘ನಿಜಾಮರ ಆಳ್ವಿಕೆಯ ಕಾಲದಲ್ಲಿ ರಜಾಕಾರರು ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿದರು. ಅದನ್ನು ದೇಶ ಮರೆತಿಲ್ಲ’ ಎಂದರು.

ತಹಶೀಲ್ದಾರ್‌ ರವೀಂದ್ರ ದಾಮಾ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಪೌರಕಾರ್ಮಿಕರಿಗೆ ಶಾಸಕರು ಸುರಕ್ಷತಾ ಕಿಟ್‌ ವಿತರಿಸಿದರು.

ಪಿಎಸ್‌ಐ ಮಹೇಂದ್ರಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದೀನ್‌, ಪುರಸಭೆ ಅಧ್ಯಕ್ಷೆ ಮಾಲಾಶ್ರೀ, ಉಪಾಧ್ಯಕ್ಷೆ ಸೌಭಾಗ್ಯವತಿ, ಸದಸ್ಯರಾದ ದಿಲೀಪಕುಮಾರ ಬಗ್ದಲಕರ್‌, ರಹೇಮಾನ ಪಾಷಾ, ನಸೀರ್‌ಖಾನ್‌, ಪಾರ್ವತಿ ರಮೇಶ, ಮೀರ್‌ ಮುಜಾಫರ್‌ ಅಲಿ, ಮಹ್ಮದ್‌ ಹಬೀಬ್‌, ಮಹ್ಮದ್‌ ನಸೀರ್‌, ನಿಸಾರೋದ್ದಿನ್‌, ಜಲೀಸಾ ಬೇಗಂ, ಪರಮೇಶ ಬಬಡಿ, ಶಶಿಕಾಂತ ಬಾಬುರಾವ್‌, ದೀಕ್ಷಿತ, ದತ್ತಾತ್ರಿ, ಶಿವರಾಜ ಹಲಗಿ, ಪುರಸಭೆ ಮಾಜಿ ಸದಸ್ಯರಾದ ಮನೋಜ ಕುಮಾರ್‌, ಅಶೋಕ ಸ್ವಾಮಿ, ಗಣ್ಯರಾದ ಕಲ್ಯಾಣರಾವ್‌ ಜಾಬಾ, ಶಾಮರಾವ್‌ ಭುತಾಳೆ, ಸಚಿನ್‌ ಮಠಪತಿ, ಮಂಜುನಾಥ ಸ್ವಾಮಿ, ಪುರಸಭೆ ಸಿಬ್ಬಂದಿ ಪೂಜಾ, ಖಾಜಾಮಿಯ್ಯ, ರವಿಕುಮಾರ್‌, ಚಿದಾನಂದ, ಸಂತೋಷ, ವೈಶಾಲಿ, ಶಿವಕುಮಾರ, ಮಹೆಬೂಬ್‌, ರಾಜಕುಮಾರ, ಸಂತೋಷ ಕುಮಾರ್‌, ನಥಾನಿಯಲ್‌, ಸಚಿನ್‌, ರಾಜೇಶ, ರವಿ, ಬಕ್ಕಣ್ಣ, ದಿಲೀಪ್‌, ಸತೀಶ, ಅಶ್ವಿನಿ, ಮಂಜುಳಾ ಹಾಗೂ ಬಕ್ಕಣ್ಣ ಇದ್ದರು.

ಪುರಸಭೆ ಕಚೇರಿ: ಇಲ್ಲಿಯ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಸರ್ದಾರ್‌ ವಲ್ಲಭಭಾಯಿ ಪಟೇಲ್‌, ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಧ್ವಜಾರೋಹಣ ನೆರವೇರಿಸಿದರು.

ಮುಖ್ಯಾಧಿಕಾರಿ ಹುಸಾಮೋದ್ದಿನ್‌ ಸ್ವಾಗತಿಸಿದರು. ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.

ನಂತರ ‘ಸ್ವಚ್ಛತಾ ಲೀಗ್‌’ ಅಭಿಯಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT