ಕಮಲನಗರ: ತಾಲ್ಲೂಕಿನ ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಾಡೋಜ ಬಸವಲಿಂಗಪಟ್ಟದ್ದೇವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭ, ಜನತೆಯ ಜಂಗಮ ಗ್ರಂಥ ಮತ್ತು ದ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ನಾಡೋಜ ಬಸವಲಿಂಗ ಪಟ್ಟದ್ದೇವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಮತನಾಡಿದ ಅವರು, ‘ಲಿಂ.ಚನ್ನಬಸವಪಟ್ಟದ್ದೇವರ ಆಶೀರ್ವಾದದ ಬಲದಿಂದ ಹಿರೇಮಠ ಸಂಸ್ಥಾನದ ಪೀಠಾಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಭಕ್ತಿ ಮತ್ತು ಬಸವ ಬಳ್ಳಿಯ ಸುಗಂಧದ ಕೇಂದ್ರ ಸಂಗಮ ಗ್ರಾಮವಾಗಿದೆ. ನಡೆ ಮತ್ತು ನುಡಿ ಪರಿಶುದ್ದವಾದಲ್ಲಿ ಲಿಂಗ ಮೆಚ್ಚುತ್ತದೆ. ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರ ವಿಶ್ವದೆತ್ತರಕ್ಕೆ ಪಸರಿಸಲು ಬಸವ ಭಕ್ತರು ನೀಡಿದ ಸಹಕಾರ ಮತ್ತು ಪ್ರೀತಿ ವರ್ಣಿಸಲು ಅಸಾಧ್ಯ’ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಬಡತನದ ಬೇಗೆಯಲ್ಲಿ ಬೆಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪ್ರಸಾದ ನಿಲಯದ ವಿದ್ಯಾರ್ಥಿಯಾಗಿ ನಾಡೋಜ ಬಸವಲಿಂಗಪಟ್ಟದ್ದೇವರ ಪ್ರವೇಶ ಪಡೆದರು. ಪೂಜ್ಯರ ಅಧ್ಯಾತ್ಮದ ಒಲವು ಮತ್ತು ವಚನ ಸಾಹಿತ್ಯದ ಅಪಾರ ಜ್ಞಾನ ಮತ್ತು ಲಿಂ. ಚನ್ನಬಸವ ಪಟ್ಟದ್ದೇವರ ಗುರುಕೃಪೆಯಿಂದ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. 60 ಕ್ಕೂ ಹೆಚ್ಚು ಶಾಲಾ ಕಾಲೇಜ್ ಆರಂಭಿಸಿ 25 ಸಾವಿರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಧರ್ಮ ಪ್ರಸಾರ ಮತ್ತು ಪ್ರಚಾರ ಕೈಗೊಂಡು ಈ ಭಾಗವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.

ಸೋಮನಾಥ ಯಾಳವಾರ ಅವರು ಅಮೃತಧಾರೆ ದ್ವನಿ ಸುರುಳಿ ಬಿಡುಗಡೆಗೊಳಿಸಿ ಮಾತನಾಡಿ, ‘ಭಾಲ್ಕಿ ಹಿರೇಮಠದ ಗುರು ಪರಂಪರೆಯನ್ನು ರಾಜ್ಯದ ಎಲ್ಲ ಮಠ ಮತ್ತು ಮಠಾಧೀಶರು ಅನುಸರಿಸಿದಲ್ಲಿ ಇಡಿ ರಾಜ್ಯದ ಚಿತ್ರಣ ಬದಲಾಗುತ್ತದೆ’ ಎಂದರು.

ಯಾದಗೀರ್ ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಶ ಬಿರಾದಾರ ಮಾತನಾಡಿದರು.

ರಾಜರಾಜೇಶ್ವರಿ ಟ್ರಸ್ಟ ಅಧ್ಯಕ್ಷೆ ಪ್ರೇಮಾ ರಾಜಶೇಖರ ಪಾಟೀಲ ಅವರು ಜನತೆ ಜಂಗಮ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.

ಜೈಪ್ರಕಾಶ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನೀಲಾಂಬಿಕೆ ಆಶ್ರಮದ ಮಹಾದೇವಮ್ಮ ತಾಯಿ ಪ್ರಾಸ್ತಾವಿಕ ಮಾತನಾಡಿದರು. ರಘುಶಂಖ ಭಾತಂಬ್ರಾ ಅವರು ಗ್ರಂಥ ಪರಿಚಯಿಸಿದರು

ವೇದಿಕೆಯಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಗೀತಾ ಈಶ್ವರ ಖಂಡ್ರೆ, ಮುಖಂಡ ಭೀಮಸೇನರಾವ ಶಿಂದೆ, ನೀಲಕಂಠ ಬಿರಾದಾರ, ಮನ್ಮಥಪ್ಪ ಬಿರಾದಾರ, ಡಾ. ಧನರಾಜ ರಾಗಾ, ಶಿವಶರಣಪ್ಪ ವಲ್ಲೇಪೂರೆ, ಜಗನ್ನಾಥ ಬಿರಾದಾರ, ನಿಡವಂಚಾದ ಗುರುಭದ್ರೇಶ್ವರ ಚೌಕಿ ಮಠದ ಮೈತ್ರಾದೇವಿ, ಧನ್ಯ ರಾಜೇಂದ್ರ, ವಿಕಾಸ ಡಗವಾಲೆ ಇದ್ದರು. ನಾಗಯ್ಯ ಸ್ವಾಮಿ ಸ್ವಾಗತಿಸಿದರು. ಸಂಜುಕುಮಾರ ಜುಮ್ಮಾ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-33-2139818156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.