ಕಮಲನಗರ: ತಾಲ್ಲೂಕಿನ ಬಳತ(ಕೆ) ಗ್ರಾಮದಲ್ಲಿ ಸರ್ಕಾರಿ ಗಾವಠಾಣ ಭೂಮಿಯಲ್ಲಿ ಅನಧಿಕೃತವಾಗಿ ನಿವೇಶನ ಹಂಚಿಕೆ ಮಾಡಿರುವ ಪಿಡಿಒ ಹಾಗೂ ಅಧ್ಯಕ್ಷರು, ಸದಸ್ಯರು ಸಾರ್ವಜನಿಕ ಮೀಸಲು ಜಮೀನನ್ನು ಅನಧಿಕೃತವಾಗಿ ವಸತಿ ನಿವೇಶನಗಳಾಗಿ ಹಂಚಿ ಡಿಜಿಟಲ್ ಖಾತೆ ಮಾಡಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿ ಡಿಜಿಟಲ್ ಖಾತೆ ರದ್ದುಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಾಶಿನಾಥ ಶೇಳೆಕೆ ಮಾತನಾಡಿ, ‘ಸ.ನಂ 81/*ರಲ್ಲಿ 19 ಎಕರೆ 17 ಗುಂಟೆ ಜಮೀನು ಇದೆ. ಅದರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಬೀರಲಿಂಗೇಶ್ವರ ದೇವಸ್ಥಾನದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಉಳಿದ ಜಮೀನಿನಲ್ಲಿ 19 ನಿವೇಶನಗಳನ್ನು ತಯಾರಿಸಿ ಡಿಜಿಟಲ್ ಖಾತೆ ನಮೂನೆ- 9 ರಲ್ಲಿ ಹಂಚಿಕೆ ಮಾಡಿದ್ದಾರೆ. ತಕ್ಷಣ ಇದನ್ನು ರದ್ದುಪಡಿಸಬೇಕು. ಅಲ್ಲದೇ ನಿವೇಶನ ಹಂಚಿಕೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ನಾಗನಾಥ ಬಿರಾದಾರ, ಶರಣಪ್ಪ ಬಿರಾದಾರ, ಕಾಂತು ಬಿರಾದಾರ, ರಾಮಶೇಟ್ಟಿ ಬಿರಾದಾರ, ರಾಮಶೇಟ್ಟಿ ಕೊರಳೆ, ಕಲ್ಲಪ್ಪ ಹೂಗಾರ, ಯೇಗೆಶ್ವರ, ಲಕ್ಷ್ಮೀಕಾಂತ, ಶ್ರೀನಿವಾಸ, ಧನರಾಜ, ಸತೀಶ, ನಾಗನಾಥ, ಸದಾನಂದ, ತಾನಾಜಿ, ಶಮಸುದ್ದೀನ್, ಸಂಜೀವಕುಮಾರ, ಸುರೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-33-1419870832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.