ಕಮಲನಗರ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮನೆಗೆ ವಾಪಸ್ಸಾದ ಯೋಧನಿಗೆ ಈಚೆಗೆ ಡೋಣಗಾಂವ(ಎಂ) ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಹೊಂಡಾಳೆ 25 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ನಿವೃತ್ತಿಯಾಗಿ ಈಚೆಗೆ ಡೋಣಗಾಂವ(ಎಂ) ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂಮಾಲೆ ಅರ್ಪಿಸಿ ಅಭಿಮಾನ ಮೆರೆದರು.

ಪುಟ್ಟ ಮಕ್ಕಳು, ಯುವಕರು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಭಾರತಾಂಬೆಗೆ ಘೋಷಣೆ ಕೂಗಿದರು. ಬಳಿಕ ಅಲಂಕೃತ ತೆರೆದ ವಾಹನದಲ್ಲಿ ನಿವೃತ್ತ ಯೋಧ ಮಲ್ಲಿಕಾರ್ಜುನ ಅವರನ್ನು ಮೆರವಣಿಗೆ ಮೂಲಕ ಕರೆದೊಯ್ದರು.

ಇದೇ ಸಂದರ್ಭದಲ್ಲಿ ಡೋಣಗಾಂವ್(ಎಂ), ರಂಡ್ಯಾಳ ಹಾಗೂ ಉದಗೀರನ್ ಹಾವಗಿಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ, ‘ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ ಭಗವಂತನಿಗೆ ಸಮಾನ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ’ ಎಂದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಸೈನಿಕ ಮಲ್ಲಿಕಾರ್ಜುನ ಹೊಂಡಾಳೆ ಮಾತನಾಡಿ, ‘ಎಲ್ಲ ವೃತ್ತಿಗಳಿಗಿಂತ ಅತ್ಯಂತ ಶ್ರೇಷ್ಠವಾದುದು ಶಿಕ್ಷಕ ಮತ್ತು ಸೈನಿಕ ವೃತ್ತಿ. ದೇಶ ಕಾಯುವ ಸೇವೆ ಮಾಡುವ ಅವಕಾಶ ದೊರೆತಿರುವುದೇ ನನ್ನ ಪುಣ್ಯ. ಇದು ನನ್ನ ಜೀವನದ ಮಹತ್ವದ ಕಾಲಘಟ್ಟ. ಪ್ರತಿಕ್ಷಣವೂ ತಾಯಿ ಭಾರತಮಾತೆಯನ್ನು ರಕ್ಷಣೆ ಮಾಡುವುದೇ ನಮ್ಮ ಗುರಿಯಾಗಿರುತ್ತದೆ’ ಎಂದರು.

ಕಾಂಗ್ರೆಸ್ ಮುಖಂಡ ಭೀಮಸೇನ್ ಸಿಂಧೆ, ಔರಾದ ತಾ.ಪಂ. ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿದರು. ಶಿಕ್ಷಕ ಪ್ರಕಾಶ ದೇಸಾಯಿ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮೌಲಿನ ಖಾನ, ಅಪ್ಪಾಸಾಬ್ ದೇಶಮುಖ, ವಿಜಯಕುಮಾರ ದೇಶಮುಖ, ಶೈಲೇಶ ದೇಶಮುಖ, ಮಹಾಳಪ್ಪ ದೇಶಮುಖ, ಶಾಲಿವಾನ ಗಂದಗೆ, ಪ್ರವೀಣ ಹೊಂಡಾಳೆ, ಮನೋಹರ ಹೊಂಡಾಳೆ ಸೇರಿದಂತೆ ಹೊಂಡಾಳೆ ಪರಿವಾರ ಹಾಗೂ ಗ್ರಾಮದ ಗಣ್ಯರು, ಯುವಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-33-220324950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.